ಪ್ರಕೃತಿ ಚಿಕಿತ್ಸೆಯೆಂಬ ಭಾರತೀಯ ವೈದ್ಯ ಪದ್ಧತಿ ಬಗ್ಗೆ ವಿದೇಶಿಯರಲ್ಲೂ ಆಸಕ್ತಿ : ಡಾ| ಶರಣಪ್ರಕಾಶ ಪಾಟೀಲ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

SDM yoga vijnana college

ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವಾರ್ಷಿಕೋತ್ಸವ, ಪಿಹೆಚ್‌ಡಿ ಕೇಂದ್ರ ಉದ್ಘಾಟನೆ.

ಉಜಿರೆ : ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪ್ರಕೃತಿ ಚಿಕಿತ್ಸೆ ಎಂಬ ಭಾರತೀಯ ವೈದ್ಯಪದ್ಧತಿ ಇಂದು ವಿಶ್ವವಿಖ್ಯಾತವಾಗಿದ್ದು ವಿದೇಶೀಯರೂ ಕೂಡ ಇದರ ಬಗ್ಗೆ ಅಪಾರ ಆಕರ್ಷಿತರಾಗಿದ್ದಾರೆ. ಅದಕ್ಕಾಗಿ ಅವರು ಈ ವೈದ್ಯ ಪದ್ಧತಿಯ ಅಭ್ಯಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಆರ್ ಪಾಟೀಲ್ ಹೇಳಿದರು.
ಮೇ ೨೨ ರಂದು ಉಜಿರೆ ಬಿಎನ್‌ವೈಎಸ್ ಕಾಲೇಜು ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾ ವಿದ್ಯಾಲಯ ಇದರ ವಾರ್ಷಿಕೋತ್ಸವ ಮತ್ತು ಪಿಹೆಚ್‌ಡಿ ಕೇಂದ್ರ ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಆಧುನಿಕ ಒತ್ತಡ ತುಂಬಿದ ಜೀವನ ಶೈಲಿಯಿಂದಾಗಿ ಜನರ ಆರೋಗ್ಯದ ಮಟ್ಟ ಭಾರೀ ಕುಸಿತಗೊಂಡಿದೆ. ಇದಕ್ಕೆಲ್ಲಾ ಪ್ರಕೃತಿ ಚಿಕಿತ್ಸೆಯಿಂದ ಪರಿಹಾರವಿದೆ. ವೈದ್ಯರು ದಯೆ, ಅನುಕಂಪ, ಜೀವನ ಕೌಶಲ್ಯದೊಂದಿಗೆ ಪರೋಪಕಾರ ಭಾವನೆ ಅಳವಡಿಸಿಕೊಂಡು ಸೇವೆ ನೀಡಬೇಕು. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಂದ ಆಗುತ್ತಿದ್ದು ಅದಕ್ಕಾಗಿ ಅಭಿನಂದಿಸುತ್ತೇನೆ ಎಂದು ಸಚಿವರು ಹೇಳಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಅಧ್ಯಕ್ಷರೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಆಧುನಿಕ ಜೀವನ ಶೈಲಿಯ ಅಳವಡಿಕೆಯಿಂದಾಗಿ ಜನರು ತಮ್ಮ ಆಯುಷ್ಯ ಮತ್ತು ಆರೋಗ್ಯ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಆರೋಗ್ಯವಂತರ ಲಕ್ಷಣ. ಆದರೆ ಇಂದು ತಡವಾಗಿ ಮಲಗಿ ತಡವಾಗಿ ಏಳುವ ಸಂಪ್ರದಾಯ ನೆಲೆಯಾಗಿದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಸರಿಯಾದ ಆಹಾರ ಕ್ರಮದಿಂದ ಅನಿಯಂತ್ರಿತವಾಗಿರುವ ಬದುಕನ್ನು ಹತೋಟಿಗೆ ತರಲು ಪ್ರಯತ್ನಿಸಬೇಕು ಎಂದರು.
ಧರ್ಮಸ್ಥಳದಿಂದ ಪ್ರಕೃತಿ ಚಿಕಿತ್ಸಾ ವೈದ್ಯರಗಳಾಗಿ ಹೊರಬರುವವರು ಪ್ರಕೃತಿ ಚಿಕತ್ಸಾ ಪದ್ಧತಿಯ ಪ್ರಚಾರದ ರಾಯಭಾರಿಗಳಾಗಿ ಸೇವೆ ಮುಂದುವರಿಸಬೇಕು ಎಂದು ಕೇಳಿಕೊಂಡ ಅವರು, ಸರ್ಕಾರ ಆಯುಷ್ ವಿಭಾಗದ ಮೂಲಕ ಪ್ರತಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಕೇಂದ್ರಗಳನ್ನು ತೆರೆಯಲು ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಚಂದ್ರಕಾಂತ್ ಪವರ್ ಪಾಯಿಂಟ್ ಮೂಲಕ ವರದಿ ಮಂಡಿಸಿದರು. ಡಾ| ಶಿವಪ್ರಸಾದ್ ಧನ್ಯವಾದವಿತ್ತರು. ಡಾ| ಜಾಸ್ಮಿನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಕರ್ನಾಟಕದ ಹೆಮ್ಮೆಯ ಜಾನಪದ ಕಲೆ ಡೊಲ್ಲುಕುಣಿತ ಮತ್ತು ಮಣಿಪುರಿ ನೃತ್ಯವನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಿಪಡಿಸಿದರು. ಅತಿಥಿಗಳು ಆಗಮಿಸುವ ದಾರಿ ಮಧ್ಯೆ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿವಿಧ ರಾಜ್ಯದ ವಿದ್ಯಾರ್ಥಿಗಳು ಅವರವರ ರಾಜ್ಯದ ಸಾಂಸ್ಕೃತಿಕ ಗರಿಮೆ ಸಾರುವ ಉಡುಗೆ ತೊಟ್ಟು ಅತಿಥಿಗಳನ್ನು ಬರಮಾಡಿಕೊಂಡದ್ದು ವಿಶೇಷವಾಗಿತ್ತು.
ಪ್ರಾರಂಭದಲ್ಲಿ ನೃತ್ಯಗಳು ಸಂಪನ್ನಗೊಂಡ ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾಲೇಜಿನ ಪ್ರಕಟಣೆಯಾಗಿರುವ ಸೃಷ್ಟಿ ಭಿತ್ತಿಪತ್ರಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕಾರ್ಯಕ್ರಮ ಕೂಡ ಇದೇ ವೇದಿಕೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.