ಲಾಯಿಲ ಪಂಚಾಯತ್ ಪ್ರಕರಣ : ತನಿಖೆ ಸಿಐಡಿಗೆ ವಹಿಸಲು ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

amulya 55

amulya 1

amulya 3

amulyaಬೆಳ್ತಂಗಡಿ : ಮೇ 26 ರಂದು ಲಾಯಿಲ ಪಂಚಾಯತ್‌ನಲ್ಲಿ ಅಗ್ನಿ ಆಕಸ್ಮಿಕದಿಂದ ಕಡತಗಳು, ಕಂಪ್ಯೂಟರ್‌ಗೆ ಹಾನಿಯಾದ ಪ್ರಕರಣವನ್ನು ಸಮಗ್ರವಾಗಿ ಸಿಐಡಿ ತನಿಖೆ ನಡೆಸಬೇಕು ಎಂದು ಶಾಸಕ.ಕೆ ವಸಂತ ಬಂಗೇರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಮಾಡಿದ್ದಾರೆ.
ಈ ಪಂಚಾಯತ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಹಣದ ದುರುಪಯೋಗ, ಕೆಲವು ಯೋಜನೆಗಳನ್ನು ಆರಂಭಿಸಿ ಅರ್ಧದಲ್ಲಿಯೇ ಕೈ ಬಿಡುವುದು, ಕಾಮಗಾರಿಗಳಿಗೆ ಅಧಿಕ ಅನುದಾನ ನಮೂದಿಸುವುದು, ಸದಸ್ಯರ ಗಮನಕ್ಕೆ ತರದೇ ತಾರತಮ್ಯ ಎಸಗುವುದು ಇತ್ಯಾದಿ ಆರೋಪಗಳಿವೆ. ಮೇ 25 ರಂದು ಇಲ್ಲಿ ಲೆಕ್ಕಪರಿಶೋಧನೆ ನಡೆಯಬೇಕಿದ್ದು ಅದಕ್ಕೆ ಪೂರ್ವಭಾವಿಯಾಗಿ ಈ ಪ್ರಕರಣ ನಡೆದಿದೆ. ಜಿ.ಪಂ ಉಪಕಾರ್ಯದರ್ಶಿಗಳು ಅಧಿಕಾರಿಗಳ ರಕ್ಷಣೆಗೆ ನಿಂತಂತಿದ್ದು ತಾವು ವೈಯಕ್ತಿಕ ಗಮನ ಹರಿಸಿ ಪ್ರಕರಣದ ತನಿಖೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ. ಅಗ್ನಿ ಆಕಸ್ಮಿಕದಿಂದಾಗಿ ಯಾವುದೇ ಕಡತಗಳು ಹಾನಿಗೀಡಾಗಿಲ್ಲ. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಪಂಚಾಯತ್‌ಗೆ ಕೆಟ್ಟ ಹೆಸರು ತರಲು ಅಪಪ್ರಚಾರ ನಿರತರಾಗಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪಂಚಾಯತ್ ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಪ್ರಕಟಣೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.