HomePage_Banner_
HomePage_Banner_
HomePage_Banner_

ಹಲ್ಲೆ ಕೇಸು ದಾಖಲು : ಹಿಂದೂ ಸಂಘಟನೆಗಳಿಂದ ಪೋಲೀಸ್ ಠಾಣೆಯ ಮುಂದೆ ಧರಣಿ

Advt_NewsUnder_1

1

2

3ಮೇ 27 ರಂದು ಬೆಳ್ತಂಗಡಿ ಪೋಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆ ಮುಖಂಡರುಗಳು ಧರಣಿ ಕೂತು ಆರೋಪಿಗಳ ವಿದುದ್ಧ ಕೂಡಲೆ ಕೇಸು ದಾಖಲಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು.

 ಬೆಳ್ತಂಗಡಿ : ಮೇ 22ರಂದು ದ್ವಿಚಕ್ರ ವಾಹನಗಳು ಡಿಕ್ಕಿಯಾದ ವಿಚಾರದಲ್ಲಿ ಮಾತುಕತೆ ನಡೆಯುತ್ತಿದ್ದ ವೇಳೆ ತಂಡವೊಂದು ಇಬ್ಬರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ತೆಂಕಕಾರಂದೂರು ಅಶೋಕ್ ಆಚಾರ್ಯ (38ವ) ಹಾಗೂ ಚಂದ್ರಹಾಸದಾಸ್ (40ವ) ಹಲ್ಲೆಗೊಳಗಾದವರು. ಅಶೋಕ್ ಅವರು ಗುರುವಾಯನಕೆರೆಯಿಂದ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಶಕ್ತಿನಗರ ಎಂಬಲ್ಲಿ ಎದುರಿನಿಂದ ಸುಲೈಮಾನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ಇಬ್ಬರಲ್ಲೇ ಮಾತುಕತೆ ನಡೆಯುತ್ತಿದ್ದು. ಇದೇ ವೇಳೆ ಅಲ್ಲಿಗೆ ಅಬ್ದುಲ್ ರಜಾಕ್ ಯಾನೆ ದದ್ದು ಮತ್ತಿತರರು ಸ್ಥಳಕ್ಕೆ ಬಂದು ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದರು.
ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಚಂದ್ರಹಾಸ ಎಂಬುವರು ಗಲಾಟೆಯನ್ನು ಗಮನಿಸಿ ತಡೆಯಲು ಬಂದಿದ್ದಾಗ ಅಬ್ದುಲ್ ರಜಾಕ್, ನಝೀರ್, ಹಸೈನಾರ್, ರಝಾಕ್, ಮತ್ತು 20 ಮಂದಿಯ ತಂಡ ಅಶೋಕ್ ಮತ್ತು ಚಂದ್ರಹಾಸ್ ಅವರಿಗೆ ಹೆಲ್ಮೆಟ್ ಹಾಗೂ ಕೈಗಳಿಂದ ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಗಾಯಗೊಂಡ ಅಶೋಕ್ ಹಾಗೂ ಚಂದ್ರಹಾಸ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 27ರಂದು ಬೆಳ್ತಂಗಡಿ ಪೋಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆ ಮುಖಂಡರುಗಳು ಧರಣಿ ಕೂತು ಆರೋಪಿಗಳ ವಿದುದ್ಧ ಕೂಡಲೆ ಕೇಸು ದಾಖಲಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು.
ಧರಣಿಯ ವೇಳೆ ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್, ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಂಜನ್ ಜಿ ಗೌಡ, ಧರ್ಮಾ ರಕ್ಷಾ ಪ್ರಮುಖ್ ಹರೀಶ್ ಪೂಂಜ, ಭಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ತಾ| ಅಧ್ಯಕ್ಷ ದಿನೇಶ್ ಮುಗುಳಿ, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಮಾಜಿ ಅಧ್ಯಕ್ಷ ಕೇಶವ, ತಾರಾನಾಥ್, ತಾ.ಪಂ ಸದಸ್ಯ ಜೋಯಲ್ ಪ್ರಮುಖರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನವೀನ್ ನೆರಿಯ, ಹರೀಶ್ ಮೂರ್ತಾಜೆ, ಭರತ್ ಇಂದಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.