ಎಸ್‌ಎಂಎ ವತಿಯಿಂದ ಮೊಹಲ್ಲಾ ಸಬಲೀಕರಣ ಅಭಿಯಾನ ಮೊಹಲ್ಲಾ ಸುಧಾರಣೆ ಎಂದರೆ ಕೇವಲ ಕಟ್ಟಡಗಳ ನಿರ್ಮಾಣ ಅಲ್ಲ: ಅಬೂಸುಫಿಯಾನ್ ಮದನಿ

 

mc 2

mca

ಉಜಿರೆ: ಮೊಹಲ್ಲಾ ಸಬಲೀಕರಣ ಎಂದರೆ ಕೇವಲ ಕಟ್ಟಡಗಳ ಅಭಿವೃದ್ಧಿ ಅಥವಾ ಇದ್ದ ಸುಸ್ಥಿತಿಯ ಕಟ್ಟಡಗಳನ್ನು ಕೆಡವಿ ಹೊಸತನ್ನು ನಿರ್ಮಿಸುವುದೆಂದು ಕೆಲವರು ಭಾವಿಸಿದಂತಿದೆ. ಆಯಾ ಜಮಾತ್‌ನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಗ, ಆರ್ಥಿಕ ಸ್ಥಿತಿಗತಿಯ ಬಗ್ಗೆ ಇರುವ ಅವಲೋಕನ ಮತ್ತು ಪ್ರಗತಿ ಹಾಗೂ ಇತರ ವಿಚಾರಗಳ ಬಗ್ಗೆ ಇರುವ ಮಾಹಿತಿ ಮಾತ್ರವೇ ಅಭಿವೃದ್ಧಿಯ ಸಂಕೇತವಾಗಿದೆ ಎಂದು ಕೆಎಂಜೆಸಿ ರಾಜ್ಯ ಪ್ರ. ಕಾರ್ಯದರ್ಶಿ ಅಬೂಸುಫಿಯಾನ್ ಹೆಚ್. ಐ ಇಬ್ರಾಹಿಂ ಮದನಿ ಹೇಳಿದರು.
ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ ಎಸ್‌ಎಂಎಉಜಿರೆ ರೀಜಿನಲ್ ಇದರ ವತಿಯಿಂದ ಮೇ. 20 ರಂದು ಉಜಿರೆ ಗ್ರಾ. ಪಂ ಸಭಾಂಗಣದಲ್ಲಿ ನಡೆದ ಮೊಹಲ್ಲಾ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಒಂದು ಮೊಹಲ್ಲಾದ ವಾಸಿಗಳ ಶೈಕ್ಷಣಿಕ ಮತ್ತು ಆರೋಗ್ಯದ ಪ್ರಗತಿಯೇ ಆ ಜಮಾತ್‌ನ ಅತಿದೊಡ್ಡ ಶಕ್ತಿಯಾಗಿದ್ದು ಆ ನಿಟ್ಟಿನಲ್ಲಿ ಜಮಾತ್‌ನ ಆಡಳಿತ ಸಮಿತಿಗಳ ವ್ಯಾಪ್ತಿಯಲ್ಲಿ ವಿವಿಧ ಅತ್ಯಗತ್ಯ ಉಪಸಮಿತಿಗಳನ್ನು ರಚಿಸಿ
ಆ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನಿಡಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು  ಅಧ್ಯಕ್ಷ ಬಿ. ಎಮ್ ಹಮೀದ್ ಉಜಿರೆ ವಹಿಸಿದ್ದರು. ಉದ್ಘಾಟನೆಯನ್ನು ಎಸ್‌ಜೆಎಂ  ಅಧ್ಯಕ್ಷ ಖಾಲಿದ್ ಮುಸ್ಲಿಯಾರ್ ಕುಂಟಿನಿ ನೆರವೇರಿಸಿದರು. ವೇದಿಕೆಯಲ್ಲಿ ಎಂ. ಕೆ ಬದ್ರುದ್ದೀನ್ ಪರಪ್ಪು, ಅಬ್ದುಲ್ ಹಮೀದ್ ಮುಂಡಾಜೆ, ಎಂಬಿಎಂ  ಸಾದಿಕ್ ಮಾಸ್ಟರ್ ಮಲೆಬೆಟ್ಟು,ಎಸ್‌ಎಂ ಕೋಯ ತಂಙಳ್ ಉಜಿರೆ, ಪತ್ರಕರ್ತ ಅಶ್ರಫ್ ಆಲಿಕುಂಞಿ, ಹೈದರ್ ಮದನಿ ಉಜಿರೆ ಮೊದಲಾದವರು ಉಪಸ್ಥಿತರಿದ್ದರು. ಅಶ್ರಫ್ ಹಿಮಮಿ ಉಜಿರೆ ಸ್ವಾಗತಿಸಿದರು. “ಮಸ್‌ಲಕ್” ಮುಂಡಾಜೆಯ ಇಬ್ರಾಹಿಂ ಸಖಾಫಿ ಕಬಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.