HomePage_Banner_
HomePage_Banner_
HomePage_Banner_

ವೈದ್ಯಕೀಯ ಪವಿತ್ರವೃತ್ತಿ: ನೈಲ್

ವೈದ್ಯಕೀಯ ವೃತ್ತಿಯು ಮೌಲ್ಯ, ಸಂಬಂಧ ಹಾಗೂ ಸಾರ್ವಜನಿಕ ವಿಶ್ವಾಸದ ಪವಿತ್ರವೃತ್ತಿ ಎಂದು ಲಂಡನ್‌ನ ಜನರಲ್ ಮೆಡಿಕಲ್ ಕೌನ್ಸಿಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೈಲ್ ಡಿಕ್ಸನ್ ಹೇಳಿದ್ದಾರೆ. ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಮಣಿಪಾಲ ವಿಶ್ವವಿದ್ಯಾನಿಲಯದ ೨೨ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವೈದ್ಯಕೀಯ ವೃತ್ತಿ ನಿರ್ವಹಿಸುವ ಸಂದರ್ಭ ತನ್ನ ವೃತ್ತಿಯ ಬಗೆಗಿನ ಗೌರವ ಹಾಗೂ ರೋಗಿಗಳ ಜತೆಗೆ ವೈದ್ಯರು ಬೆರೆತುಕೊಳ್ಳುವ ವಿಧಾನ ಇವೆರಡೂ ಭಾವನಾತ್ಮಕವಾಗಿ ವೈದ್ಯಕೀಯ ಕ್ಷೇತ್ರದ ಗಟ್ಟಿತನಕ್ಕೆ ಸಾಕ್ಷಿಯಾಗುತ್ತವೆ. ಅದು ಸಮಾಜದಲ್ಲಿ ವಿಶ್ವಾಸದ ಅಲೆಯನ್ನು ಮೂಡಿಸುತ್ತದೆ ಎಂದಿದ್ದಾರೆ. ಘಟಿಕೋತ್ಸವದಲ್ಲಿ ೫೭೭ ಪದವೀಧರರು, ೪೧೯ ಸ್ನಾತಕೋತ್ತರ ಪದವೀಧರರು ಹಾಗೂ ೨೭ ಪಿಎಚ್‌ಡಿ ಪದವೀಧರರು ಸೇರಿದಂತೆ ಒಟ್ಟು ೧,೦೨೩ ವಿದ್ಯಾರ್ಥಿಗಳಿಗೆ ಪದವಿ ಪತ್ರ ಪ್ರಧಾನ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.