ರ‍್ಯಾಪಿಡ್ ಚೆಸ್ : ಶಾಬ್ದಿಕ್ ವರ್ಮಗೆ ಪ್ರಶಸ್ತಿ

shabdhik varma  ಬೆಳ್ತಂಗಡಿ : ಮೇ 22 ರಂದು ನಡೆದ ಟ್ಯಾಪ್ಮಿ, ಮಣಿಪಾಲ ಲಯನೆಸ್ ಮತ್ತು ಲಯನ್ಸ್ ಕ್ಲಬ್‌ಗಳ ಪ್ರಾಯೋಜಕತ್ವದಲ್ಲಿ ನಡೆದ ಕಲ್ಯ ದೇವರಾಯ ಶೆಣೈ ಸ್ಮರಣಾರ್ಥ ರ‍್ಯಾಪಿಡ್ ಚೆಸ್ ಸ್ಪರ್ಧೆಯ ಮುಕ್ತ ವಿಭಾಗದಲ್ಲಿ ಬೆಳ್ತಂಗಡಿಯ ನ್ಯಾಯವಾದಿ ರತ್ನವರ್ಮ ಬುಣ್ಣು ಅವರ ಪುತ್ರ ಶಾಬ್ದಿಕ್ ವರ್ಮ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಜಿಲ್ಲಾ ಪೋಲೀಸ್ ಆಯುಕ್ತ ಅಣ್ಣಾಮಲೈ ಈ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಗರಸಭೆಯ ಮಾಜಿ ಅಧ್ಯಕ್ಷ ಸೋಮಶೇಖರ್ ಭಟ್ ಪ್ರಶಸ್ತಿ ವಿತರಿಸಿದರು.
ಸಿಂಡಿಕೇಟ್ ಬ್ಯಾಂಕಿನ ಸತೀಶ್ ಕಾಮತ್, ಲಯನ್ಸ್ ಜಿಲ್ಲಾ ಗವರ್ನರ್ ಶ್ರೀಧರ್, ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ಡಾ| ರಾಜಗೋಪಾಲ್ ಶೆಣೈ, ಲೆಕ್ಕಪತ್ರ ಪರಿಶೋಧಕ ಅನಂತನಾರಾಯಣ ಪೈ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಡಾ| ಅಶೋಕ್ ಕುಮಾರ್ ಉಪಸ್ಥಿತರಿದ್ದರು.
ಯಶೋದಾ ಮೋಹನ್ ದಾಸ್, ರಮೇಶ್ ಕಿಣಿ, ಕೇಶವರಾಯ ಪೈ ಉಪಸ್ಥಿತರಿದ್ದರು. ಡಾ| ಗಣೇಶ್ ಪೈ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.