ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ ಇದರ ವತಿಯಿಂದ ಮಲೇರಿಯಾ, ಡೆಂಗ್ಯೂ, ಹೆಚ್1ಎನ್ 1, ಇಲಿಜ್ವರ, ಇತ್ಯಾ ದಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರ ಜಾಥಾವು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವಠಾರದಿಂದ ಇಲ್ಲಿನ ಬಸ್ ಸ್ಟ್ಯಾಂಡ್ ವರೆಗೆ ನಡೆಯಿತು. ಮೇ. 20 ರಂದು ನಡೆಯಿತು. ಇದರ ವತಿಯಿಂದ ಜನಜಾಗೃತಿ ಮೂಡಿಸಲು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಿಂದ ಕಿರಿಯ ಆರೋಗ್ಯ ಸಹಾಯಕಿಯರು ಪುರುಷ / ಮಹಿಳೆಯರು ಹಾಗೂ ಆಶಾಕಾರ್ಯ ಕರ್ತೆಯರು ಮತ್ತು ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದ ಆರೋಗ್ಯ ಇಲಾಖಾ ಅಧಿಕಾರಿಯವರ ಸಹಕಾರದೊಂದಿಗೆ ಡೆಂಗ್ಯೂ ವಿರೋಧಿ ದಿನಾಚರಣೆಯ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ| ಅರುಣ್ ಕುಮಾರ್ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ಡಾ| ರಾಜೇಶ್ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಜಿಲ್ಲಾ ಆರೋಗ್ಯ ಪರಿವೀಕ್ಷಕರು ಜಯರಾಮ ಪೂಜಾರಿ ಸಂಪನ್ಮೂಲಕರು ಡೆಂಗ್ಯೂ ಮಾಹಿತಿಯನ್ನು ನೀಡಿದರು. ಡಾ| ಕಲಾಮಧು ಕೆ.ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ| ಆದಂ ಆಡಳಿತ ವೈದ್ಯಾಧಿಕಾರಿ, ಹಿರಿಯ ಆರೋಗ್ಯ ಸಹಾಯಕ, ಖಾದರ್ ಸಾಬ್, ಜಿಲ್ಲಾ ಸರ್ವೇಕ್ಷಣಾ ಕಛೇರಿ ಮಂಗಳೂರು ಹಾಗೂ ತಾಲೂಕು ಆರೋಗ್ಯಾಧಿ ಕಛೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರ ಸಹಕರದೊಂದಿಗೆ ಗ್ರಾಮ ಪಂಚಾಯತ್ ಅಧಿಕಾರಿಯವರಿಗೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಆರೋಗ್ಯ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಈ ಕಾರ್ಯಕ್ರಮದ ಅದ್ಯಕ್ಷತೆ ತಾ.ಪಂ ಅಧ್ಯಕ್ಷ ಶ್ರೀಮತಿ ದಿವ್ಯಜ್ಯೋತಿ ಹಾಗೂ ಜಿಲ್ಲಾ.ಪಂ ಸದಸ್ಯರು ಹಾಜರಾಗಿದ್ದರು.