ಲಾಯಿಲ ಕಾರ್ಮೆಲ್ ಸದನದಿಂದ ಗ್ರಾಮಸ್ಥರಿಗೆ ಕುಡಿಯುವ ನೀರು

karmel sadana copy ಲಾಯಿಲ : ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಅಭಾವ ಕಂಡು ಬಂದಿದ್ದು ಕಳೆದ 1 ವಾರದಿಂದ ಕಾರ್ಮೆಲ್ ಸದನದಿಂದ ದಿನಕ್ಕೆ 16 ಗಂಟೆಗಳ ಕಾಲ ಕೊಳವೆ ಬಾವಿಯಿಂದ ನೀರು ಬಿಡಲಾಗಿದೆ.
ಕಾರ್ಮೆಲ್ ಸದನ ಲಾಲ ಚರ್ಚ್‌ನ ತೋಟಕ್ಕೆ ತೆಗೆಸಿದ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿರುವುದನ್ನು ಮನಗಂಡ ಲಾಲ ಪಂಚಾಯತ್ ಚರ್ಚ್‌ಗೆ ಮನವಿ ಸಲ್ಲಿಸಿದ ಮೇರೆಗೆ ಇಲ್ಲಿಂದ ನೀರು ಬಿಡಲಾಗುತ್ತಿದೆ. ತಮ್ಮ ತೋಟಕ್ಕೆ ನೀರು ಇಲ್ಲದಿದ್ದರು ಪರವಾಗಿಲ್ಲ. ಕುಡಿಯಲು ಎಷ್ಟು ಬೇಕಾದರೂ ನೀರು ನೀಡಲು ಒಪ್ಪಿಕೊಂಡಿದ್ದಾರೆ. ನನ್ನನ್ನು ಪ್ರೀತಿಸಿದಂತೆ ಪರರನ್ನು ಪ್ರೀತಿಸು ಎಂಬ ಏಸು ಕ್ರಿಸ್ತರ ದ್ಯೇಯ ವಾಕ್ಯದೊಂದಿಗೆ ಇಲ್ಲಿ ಯಥೇಚ್ಛವಾಗಿ ನೀರು ಬಿಡುಗಡೆ ಮಾಡಲಾಗಿದೆ. ಲಾಲ ಗ್ರಾಮದ ಅಯೋಧ್ಯಾನಗರ, ಪಿಲಿಪಂಜರ, ಲಾಲ ಪೇಟೆಯ ನಿವಾಸಿಗಳು, ಕೊಯ್ಯೂರು ಕ್ರಾಸ್ ಮೊದಲಾದ ಕಡೆಗಳಲ್ಲಿ ಸಮರ್ಪಕ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದು ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿ ಚರ್ಚ್‌ನ ಧರ್ಮಗುರುಗಳನ್ನು ಭೇಟಿ ಮಾಡಿ ಈ ಸ್ಥಳಗಳಿಗೆ ನೀರು ಬಿಡುವಂತೆ ಕೋರಿಕೆ ಸಲ್ಲಿಸಿದ ಮೇರೆಗೆ ನೀರು ಬಿಡಲಾಗುತ್ತಿದೆ. ಈ ಸೇವೆಯನ್ನು ಮನಗಂಡ ಲಾಲ ಗ್ರಾ.ಪಂ. ಚರ್ಚ್ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.