ಧರ್ಮಸ್ಥಳದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

dharmasthala Ambedkar jayanthiದಲಿತರಿಗೆ ಅಂಬೇಡ್ಕರ್‌ರವರೇ ನಿಜವಾದ ದೇವರು

  ಧರ್ಮಸ್ಥಳ: ದಲಿತರ ಪಾಲಿಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರೇ ನಿಜವಾದ ದೇವರು. ನಮಗೆ ದೇವರ ಪೂಜೆ ಮಾಡಲು, ದೇವಸ್ಥಾನಗಳಿಗೆ ಹೋಗಲು ಅವಕಾಶ ಕಲ್ಪಿಸಿದವರೇ ಅವರು. ಇಲ್ಲವಾದಲ್ಲಿ ನಾವು ಯಾವುದೇ ದೇವರ ದರ್ಶನ ಮಾಡುವಂತಿರಲಿಲ್ಲ. ಮೊದಲು ಅವರನ್ನು ನಾವು ಪೂಜಿಸ ಬೇಕು. ಆದರೆ ಅಂಬೇಡ್ಕರ್‌ರವರು ಒದಗಿಸಿದ ಮೀಸಲಾತಿಯ ಕಾರಣದಿಂದ ಉನ್ನತ ಹುದ್ದೆ ಗಳಿಸಿ ಸ್ಥಿತಿವಂತರಾಗಿರುವ ದಲಿತರೇ ಅಂಬೇಡ್ಕರ್‌ರವರನ್ನು ಅರಿಯಲು ಮುಂದಾಗದಿರುವುದು, ಅವರ ತತ್ವ ಆದರ್ಶಗಳ ಮಾರ್ಗದಲ್ಲಿ ನಡೆಯದಿರುವುದು ಈ ಸಮಾಜದ ಬಹುದೊಡ್ಡ ದುರಂತ ಎಂದು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ. ಅವರು ನುಡಿದರು.
ಅವರು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕದ ಆಶ್ರಯದಲ್ಲಿ ಮೇ.೧೪ ರಂದು ಧರ್ಮಸ್ಥಳದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೨೫ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನ ನಿವೃತ್ತ ಅಭಿವೃದ್ಧಿ ಅಧಿಕಾರಿ ಬಿ. ರತ್ನರಾಜ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ತನ್ನ ಬಾಲ್ಯದ ದಿನಗಳಲ್ಲೂ ಆದಿದ್ರಾವಿಡ ಸಮಾಜದ ಮಕ್ಕಳೊಂದಿಗೆ ಆಟವಾಡುತ್ತಾ ಬಾಲ್ಯವನ್ನು ಕಳೆದಿದ್ದೆ, ಇಂದು ನಿವೃತ್ತಿಯ ಸಂದರ್ಭದಲ್ಲೂ ಈ ಸಮಾಜದವರು ನನ್ನನ್ನು ಗೌರವಿಸಿರುವುದು ಅತ್ಯಂತ ಸಂತಸ ನೀಡಿದೆ ಎಂದು ಭಾವುಕರಾದರು. ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭ ಪಂಚಾಯತ್‌ನ ಎಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರವಿತ್ತ ಅಶೋಕನಗರದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶರತ್ ಅಧ್ಯಕ್ಷತೆ ವಹಿಸಿ ಅಂಬೇಡ್ಕರ್‌ರವರ ಜೀವನ ಚರಿತ್ರೆಯನ್ನು ಓದಿದವರಿಗೆ ಜಾತಿ ಸಂಘಟನೆಯ ಅಗತ್ಯ ಏನೆಂಬುದು ತಿಳಿಯಬಹುದು ಎಂದರು. ಗ್ರಾ.ಪಂ. ಸದಸ್ಯೆ ಶ್ರೀಮತಿ ಹೊನ್ನಮ್ಮ, ಅಮ್ಮು ಗುರಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಕು. ಮಮತಾ ಮತ್ತು ಮಧುರ ಪ್ರಾರ್ಥಿಸಿ, ವಲಯ ಘಟಕದ ಕೋಶಾಧಿಕಾರಿ ಶೇಖರ ವಿ. ಸ್ವಾಗತಿಸಿದರು. ಶ್ರೀಮತಿ ಶಾರದಾ ಡಿ. ವರದಿ ವಾಚಿಸಿದರು. ವಲಯ ಘಟಕದ ಅಧ್ಯಕ್ಷ ರಾಘವ ಡಿ. ಧನ್ಯವಾದವಿತ್ತರು. ಶೇಖರ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.