ವೇಣೂರು: ಅಂಡಿಂಜೆಯಲ್ಲಿ ಸಾರ್ವಜನಿಕ ಶನಿಪೂಜೆ

Advt_NewsUnder_1
Advt_NewsUnder_1

shaniಗ್ರಾಮದ ಸುಭೀಕ್ಷೆ ಸಂಘಟನೆಗಳ ಧ್ಯೇಯವಾಗಲಿ

ವೇಣೂರು : ಸಂಘಟನೆ, ಸಂಘ-ಸಂಸ್ಥೆಗಳ ಉತ್ತಮ ಕಾರ್ಯಗಳಿಂದ ಊರಿಗೆ ಶಕ್ತಿ ತುಂಬುತ್ತದೆ. ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಂಘಟನೆಗಳು ಊರಿನ ಹಿತ ಕಾಯುವ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕು. ಗ್ರಾಮದ ಸುಭೀಕ್ಷೆ ಸಂಘಟನೆಗಳ ಧ್ಯೇಯವಾಗಲಿ ಎಂದು ಅಂಡಿಂಜೆ ಗ್ರಾಮ ಪಂಚಾಯತು ಅಧ್ಯಕ್ಷ ಮೋಹನ ಅಂಡಿಂಜೆ ಹೇಳಿದರು.
ಅವರು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಘಟಕ ಅಂಡಿಂಜೆ ಇದರ ವತಿಯಿಂದ ಇಲ್ಲಿಯ ಕಿಲಾರ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಜರಗಿದ ಪ್ರಥಮ ವರ್ಷದ ಸಾರ್ವಜನಿಕ ಶನಿಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಮೇಶ್ ನಡ್ತಿಕಲ್ಲು ಧಾರ್ಮಿಕ ಉಪನ್ಯಾಸ ನೀಡಿದರು. ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕ ರಾಮ್ ಪ್ರಸಾದ್ ಮರೋಡಿ, ವಿಶ್ವ ಹಿಂದು ಪರಿಷತ್ ಅಂಡಿಂಜೆ ಘಟಕದ ಅಧ್ಯಕ್ಷ ಉಮೇಶ್ ಆಚಾರ್ಯ, ಸಂಚಾಲಕ ಸಚಿನ್ ಮರೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕು| ನಿಖಿತಾ ಮರೋಳಿ, ನಿಶಾಂತ್ ಮಂಜಿಬೆಟ್ಟು, ಕು| ಕಾವ್ಯ ‘ಕವಿತಾ ನಿಕೇತನ ಅಂಡಿಂಜೆ ಇವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ರಾಜಶೇಖರ ಅಂಡಿಂಜೆ ಸ್ವಾಗತಿಸಿ ನಿತಿನ್ ಮುಂಡೇವು ವಂದಿಸಿದರು. ರಾಘವ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.