ಕುಪ್ಪೆಟ್ಟಿ : ಇಲ್ಲಿಯ ಎಸ್.ವೈ.ಎಸ್ ಬ್ರಾಂಚ್ ಸಮಿತಿ ವತಿಯಿಂದ ಎರಡನೇ ಜಲಾಲಿಯ ದ್ಸಿಖ್ರ್ ಮಜ್ಲಿಸ್ ಕಾರ್ಯಕ್ರಮ ಸೆಯ್ಯೆದ್ ಹಬೀಬುಲ್ಲಾ ಪೂ ಕೋಯ ತಂಙಳ್ರವರ ದುಅ ದೊಂದಿಗೆ ನೆರವೇರಿತು.
ಮುಖ್ಯ ಪ್ರಭಾಷಣಗೈದ ಕೇರಳ ರಾಜ್ಯ ಎಸ್.ವೈ.ಎಸ್ ಅಧ್ಯಕ್ಷರು, ಸುನ್ನೀ ರಂಗದ ಅಂತರಾಷ್ಟ್ರೀಯ ನೇತಾರ ಶೈಖುನಾ ಅಬ್ದುರ್ರಹ್ಮಾನ್ ಸಖಾಫಿ ಪೆರೋಡ್ ಉಸ್ತಾದ್ ಮಾತನಾಡಿ ದ್ಸಿಖ್ರ್ ಮಜ್ಲಿಸ್ಗಳನ್ನು ನಡೆಸುವುದರಿಂದ ಆತ್ಮಶುದ್ಧಿಯೊಂದಿಗೆ ಇಹಪರ ವಿಜಯವು ಲಭಿಸುತ್ತದೆ ಎಂದರು. ಹಂಝ ತಂಙಳ್ ಕರ್ಪಾಡಿ, ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಬಂಡಸಾಲೆ, ಎಸ್.ವೈ.ಎಸ್ ಸೆಂಟರ್ ಅಧ್ಯಕ್ಷರಾದ ಹಾಜಿ ಅಬ್ದುರ್ರಝಾಕ್ ಸಖಾಫಿ, ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷ ಕುಂಞಮೋನ್ ಹಾಜಿ, ಎಸ್.ಜೆ.ಎಂ ಅಧ್ಯಕ್ಷ ಹಮೀದ್ ಸಅದಿ, ವಕಫ್ ಮಂಡಳಿ ನಿರ್ದೇಶಕರಾದ ಕಾಸಿಂ ಪದ್ಮುಂಜ, ಎಸ್.ಎಂ.ಎ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಎಸ್.ಜೆ.ಎಂ ಕಾರ್ಯದರ್ಶಿ ಅಬೂಬಕರ್ ಲೆತೀಫಿ, ಸುಲೈಮಾನ್ ಸಅದಿ ತುರ್ಕಳಿಕೆ, ಹಾಗೂ ಹಲವಾರು ಉಲಮಾ, ಉಮರಾ ನೇತಾರರು ಉಪಸ್ಥಿತರಿದ್ದರು. ಇಬ್ರಾಹಿಂ ಫೈಝಿ ಸ್ವಾಗತಿಸಿ, ಎಸ್.ಎಸ್.ಎಫ್ ಅಧ್ಯಕ್ಷ ಅಬ್ದುರ್ರಝಾಖ್ ಸಖಾಫಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಕುಪ್ಪೆಟ್ಟಿ ರೇಂಜ್ ಎಸ್.ಜೆ.ಎಂ, ಹಾಗೂ ಕುಪ್ಪೆಟ್ಟಿ ಸೆಂಟರ್ ಎಸ್.ವೈ.ಎಸ್ ವತಿಯಿಂದ ಉಸ್ತಾದರನ್ನು ಸನ್ಮಾನಿಸಲಾಯಿತು.