ಬೆಳ್ತಂಗಡಿ : ಕೆಎಸ್ಸಾರ್ಟಿಸಿ ಬಸ್ನಲ್ಲಿ ಮರೆತು ಹೋಗಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ನ್ನು ಬಸ್ಸಿನ ಚಾಲಕ ಪ್ರಾಮಾಣಿಕವಾಗಿ ಅದರ ವಾರಿಸುದಾರರಿಗೆ ಹಿಂತಿರುಗಿಸಿದ ಘಟನೆ ವರದಿಯಾಗಿದೆ.
ಗರ್ಡಾಡಿ ನಿವಾಸಿ ರತ್ನಾಕರ ಪೈಯವರು ಬೆಳ್ತಂಗಡಿಯಿಂದ ಮಂಗಳೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ನಲ್ಲಿ ಹೋಗಿ ಮಂಗಳೂರಿನಲ್ಲಿ ಇಳಿಯುವಾಗ ತಮ್ಮ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ನ್ನು ಮರೆತಿದ್ದರು.
ಮಂಗಳೂರು ಡಿಪ್ಪೋ ೩ ಇದರ ಬಸ್ಸಿನ ನಿರ್ವಾಹಕರಾದ ಶುಭಾಶ್ ಕಾಂಬ್ಲೆಯವರು ಬಸ್ಸಿನಲ್ಲಿ ಅನಾಥವಾಗಿದ್ದ ಬ್ಯಾಗ್ವೊಂದನ್ನು ಕಂಡು ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅದು ರತ್ನಾಕರ ಪೈಯವರಿಗೆ ಸೇರಿದ ಬ್ಯಾಗ್ ಆಗಿತ್ತು. ನಿರ್ವಾಹಕ ಶುಭಾಶ್ ಅವರು ಪೈಯವರಿಗೆ ಬ್ಯಾಗ್ನ್ನು ಯಾವುದೇ ಫಲಾಪೇಕ್ಷೆ ಬಯಸದೇ ಹಿಂತಿರುಗಿಸಿ ಮಾನವೀಯತೆ ಮೆರೆದರು.