ಅಳದಂಗಡಿ : ಅಳದಂಗಡಿ ಸನಿಹದ ಸುಲ್ಕೇರಿ ನಾವರ ಗೋಳಿಕಟ್ಟೆ ನಿವಾಸಿ ಅನಾರೋಗ್ಯ ಪೀಡಿತರಾಗಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮೋಹನ ನಾಯ್ಕ ಅವರಿಗೆ ತುಳುನಾಡು ಫ್ರೆಂಡ್ಸ್ ಮತ್ತು ಎಸ್ಡಿಪಿಐ ವತಿಯಿಂದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಸುಲ್ಕೇರಿ ಗ್ರಾ.ಪಂ. ಸದಸ್ಯ ರವಿ ಪೂಜಾರಿ, ಎಸ್ಡಿಪಿಐ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನವಾಝ್ ಶರೀಫ್ ಪೆರಾಲ್ದರಕಟ್ಟೆ, ತುಳುನಾಡು ಫ್ರೆಂಡ್ಸ್ ಮುಖಂಡರಾದ ರಾಘವೇಂದ್ರ ಆಚಾರ್ಯ ಪಿಲ್ಯ, ಸಂತೋಷ್ ಕುಲಾಲ್, ಲಕ್ಷ್ಮಣ್ ಕುಲಾಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.