ಬೆಳ್ತಂಗಡಿ ತಾಲೂಕು ಮಟ್ಟದ ಕುಲಾಲ ಕ್ರೀಡೋತ್ಸವ ಉದ್ಘಾಟನೆ ಕ್ರೀಡೆಯಿಂದ ಯುವ ಸಮುದಾಯದ ಜಾಗೃತಿ : ಉದಯ ಕುಮಾರ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kulala kridakuta udhagataneಗುರುವಾಯನಕೆರೆ : ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಮತ್ತು ಕುಲಾಲ-ಕುಂಬಾರರ ಯುವ ವೇದಿಕೆ ಹಾಗೂ ತಾಲೂಕು ಕ್ರೀಡಾ ಸಮಿತಿ ಇದರ ಸಹಯೋಗದೊಂದಿಗೆ ತಾಲೂಕಿನ ಸ್ವಜಾತಿ ಬಾಂಧವರ ತಾಲೂಕು ಕುಲಾಲ ಕ್ರೀಡೋತ್ಸವ ಸರ್ವಜ್ಞ ಟ್ರೋಫಿ-೨೦೧೬ ಕಾರ್ಯಕ್ರಮವು ಮೇ ೧೫ರಂದು ಗುರುವಾಯನಕೆರೆಯ ಕೆರೆ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ಜರುಗಿತು.
ಕ್ರೀಡಾ ಕೂಟವನ್ನು ಬಂದಾರು ಗ್ರಾ.ಪಂ. ಅಧ್ಯಕ್ಷ, ನ್ಯಾಯವಾದಿ ಬಿ.ಕೆ. ಉದಯ ಕುಮಾರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾಜದ ಯುವ ಜನರ ಜಾಗೃತಿ ಮತ್ತು ಸಂಘಟನೆಗಾಗಿ ಇಂತಹ ಕ್ರೀಡಾಕೂಟಗಳು ಅಗತ್ಯವಾಗಿದ್ದು, ಇದರಿಂದ ನಮ್ಮ ಸಮಾಜದ ಶಕ್ತಿ ಪ್ರದರ್ಶನವಾಗಲು ಸಾಧ್ಯವಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳಾಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ. ಮೋಹನ್ ಬಂಗೇರ ಕಾರಿಂಜ ಅವರು ಮಾತನಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವುದರ ಜೊತೆಗೆ ಅವರನ್ನು ಸುಸಂಸ್ಕೃತ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ತಾಯಂದಿರ ಮೇಲಿದೆ. ನಮ್ಮ ಸಮಾಜದ ಸಂಘಟನೆಗಾಗಿ ಪ್ರತಿಯೊಂದು ಮನೆಯ ಸಂಪೂರ್ಣ ಮಾಹಿತಿ ಸಂಘದಲ್ಲಿದ್ದರೆ ಉತ್ತಮ ಎಂದು ಸಲಹೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕುಲಾಲ- ಕುಂಬಾರರ ಯುವ ವೇದಿಕೆ ಅಧ್ಯಕ್ಷ ಹಾಗೂ ಕ್ರೀಡಾ ಸಮಿತಿ ಸಲಹೆಗಾರ ಹರೀಶ್ ಕಾರಿಂಜ ಅವರು ಮಾತನಾಡಿ ಇಂದು ಪ್ರತಿಯೊಂದು ಜಾತಿಗಳಲ್ಲಿ ಜಾತಿ ಸಂಘಟನೆಯಿದ್ದು, ಕುಲಾಲ ಕುಂಬಾರರ ಸಂಘಟನೆಯಾಗಬೇಕು ಅದಕ್ಕೆ ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಿದೆ. ನಾವೆಲ್ಲ ಒಟ್ಟಾಗಬೇಕು, ನಮ್ಮಲ್ಲಿರುವ ಪ್ರತಿಭೆಗಳ ವಿಕಸನಕ್ಕೆ ಇದು ವೇದಿಕೆಯಾಗಿದೆ ಕಳೆದ ಮೂರು ವರ್ಷಗಳಿಂದ ಈ ಕ್ರೀಡಾ ಕೂಟ ನಿರಂತರವಾಗಿ ನಡೆದು ಬರುತ್ತಿದೆ. ಇದಕ್ಕೆ ಸಮಾಜ ಬಾಂಧವರ ಸಂಪೂರ್ಣ ಸಹಕಾರ ಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋವಿಂದ ಮೂಲ್ಯ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಕುಲಾಲ್, ಕ್ರೀಡಾ ಸಮಿತಿ ಅಧ್ಯಕ್ಷ ತಿಲಕ್‌ರಾಜ್, ಗೋಳಿಯಂಗಡಿ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಹರೀಶ್ ಪೆರ್ಮುಡ, ಕುವೆಟ್ಟು ಗ್ರಾ.ಪಂ. ಸದಸ್ಯ ವಿಶ್ವನಾಥ ಬರಾಯ ಉಪಸ್ಥಿತರಿದ್ದರು.
ಕ್ರೀಡಾ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಕುಲಾಲ್ ಗುರುವಾಯನಕೆರೆ ಸ್ವಾಗತಿಸಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಮಿತಿ ಸಲಹೆಗಾರರಾದ ಯತೀಶ್ ಸಿರಿಮಜಲು ಧನ್ಯವಾದವಿತ್ತರು.
ಕ್ರೀಡಾ ಸಮಿತಿ ಉಪಾಧ್ಯಕ್ಷ ಜಗದೀಶ್ ಬರಾಯ, ಸಂತೋಷ್ ಭಾರ್ಗವಿ, ಕಾರ್ಯದರ್ಶಿ ಪ್ರವೀಣ್ ಬರಾಯ, ಜೊತೆ ಕಾರ್ಯದರ್ಶಿ ಜಯಂತ್, ದಾಮೋದರ ಗುರುವಾಯನಕೆರೆ, ಕೋಶಾಧಿಕಾರಿ ಜೀವನ್ ಕುಲಾಲ್, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, ಮೋಹನ್ ಕಬ್ಬಿಣಹಿತ್ಲು, ಸಲಹೆಗಾರರಾದ ಮೋಹನ್ ಕಂಚಿಂಜೆ, ಮಿಥುನ್ ಮಡಂತ್ಯಾರು, ದಿನಕರ ಕುಲಾಲ್ ಕುಂಡದಬೆಟ್ಟು, ಗಂಗಾಧರ ಕುಲಾಲ್ ಬರಾಯ ಸೇರಿದಂತೆ ಕ್ರೀಡಾ ಸಮಿತಿ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.