ಶಿರ್ಲಾಲು ಗ್ರಾಮದ ಬಗ್ಯೊಟ್ಟು ದೈವಸ್ಥಾನಕ್ಕೆ ಶಿಲಾನ್ಯಾಸ

shirlal pilichamundi daivastana shilanyasaಶಿರ್ಲಾಲು : ಶಿರ್ಲಾಲು ಗ್ರಾಮದ ಬಗ್ಯೊಟ್ಟು ಎಂಬಲ್ಲಿ ಕಳೆದ 500 ವರ್ಷಗಳಿಂದ ಶಿರ್ಲಾಲು, ನಲ್ಲಾರು, ಸುಲ್ಕೇರಿಮೊಗ್ರು ಹಾಗೂ ಕರಂಬಾರು ಗ್ರಾಮಗಳ ಆಸ್ತಿಕ ಬಂಧುಗಳು ಆರಾಧನೆ ಮಾಡಿಕೊಂಡು ಬರುತ್ತಿದ್ದ, ಪ್ರಧಾನ ದೈವ ಶ್ರೀ ಪಿಲಿಚಾಮುಂಡಿ, ಪರಿವಾರ ದೈವಗಳಾದ ಶ್ರೀ ಕೊಡಮಣಿತ್ತಾಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ-ಕಾಳಮ್ಮ, ಮಹಮ್ಮಾಯಿ, ಗುಳಿಗ ಈ ಸಾನಿಧ್ಯದಲ್ಲಿ ೮೭ ವರ್ಷಗಳಿಂದ ಆರಾಧನೆ ನಿಂತುಹೊಗಿದ್ದು ಇದರ ಜೀರ್ಣೋದ್ಧಾರ ಕಾರ್ಯಗಳ ಪೂರ್ವಭಾವಿಯಾಗಿ ಶ್ರೀ ಪಿಲಿಚಾಮುಂಡಿ ದೈವದ ದೈವಸ್ಥಾನದ ಶಿಲಾನ್ಯಾಸ ಕಾರ‍್ಯಕ್ರಮ ಇತ್ತೀಚೆಗೆ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ವಹಿಸಿ ಶಿಲಾನ್ಯಾಸ ನೆರವೇರಿಸಿ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ‍್ಯದಲ್ಲಿ ೪ ಗ್ರಾಮಗಳ ಎಲ್ಲಾ ಜನರು ಸೇರಿಕೊಂಡು ಮುಂದಿನ ಒಂದು ವರ್ಷಗಳ ಒಳಗಾಗಿ ದೈವಗಳನ್ನು ಪುನಃ ಪ್ರತಿಷ್ಠೆ ಮಾಡಿ ಕಲಶಾಭಿಷೇಕ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಗ್ರಾಮಸ್ಥರಿಗೆ ತಿಳಿಯಪಡಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಸೋಮನಾಥ ಬಂಗೇರ ವರ್ಪಾಳೆ, ಸುರೇಶ್ ಪೂಜಾರಿ ಉದ್ಯಮಿ ಮುಂಬೈ, ನವೀನ್ ಕೆ ಕರಂಬಾರು ಬೀಡು ಸೀತಾರಾಮ ಹೆಬ್ಬಾರ್ ರಾಜಮುಗೇರು, ಹರ್ಷ ಆರ್ ಜೈನ್, ಸೂರ‍್ಯನಾರಾಯಣ ರಾವ್ ಅರ್ಚಕರು ಭಾಗವಹಿಸಿದ್ದರು.
ಸಮಿತಿಯ ಕಾರ‍್ಯಾಧ್ಯಕ್ಷರಾದ ಚಿದಾನಂದ ಪೂಜಾರಿ, ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಬಂಗೇರ, ಸುಂದರ ಬುನ್ನಾಲ್, ಕೋಶಾಧಿಕಾರಿ ಪ್ರಕಾಶ್ ಕುಮಾರ್ ಜೈನ್, ಶಿರ್ಲಾಲು ಸಿ.ಎ ಬ್ಯಾಂಕ್ ಅಧ್ಯಕ್ಷರಾದ ಕೃಷ್ಣಪ್ಪ, ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪಿ.ಹೆಚ್ ನಿತ್ಯಾನಂದ ಶೆಟ್ಟಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು, ವಿಶ್ವನಾಥ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಜೊತೆ ಕಾರ್ಯದರ್ಶಿ ನಿರಂಜನ್ ಕುಲಾಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.