ಸಾವಿನ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ!

ಕಾರು ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಗರ್ಭಿಣಿಯನ್ನು ಕೂಡಲೇ ಶಸ್ತ್ರಚಿಕಿತ್ಸೆಗೊಳಪಡಿಸಿ ಮಗುವನ್ನು ಜೀವಂತವಾಗಿ ಹೊರತೆಗೆದ ಘಟನೆ ಅಮೆರಿಕದಲ್ಲಿ ನಡೆದಿದೆ. ಅಚ್ಚರಿಯಾದರೂ ಇದು ಸತ್ಯ. ಮಿಸ್ಸೌರಿ ವೈದ್ಯರ ತಂಡವೊಂದು ಇಂತದ್ದೊಂದು ವಿಸ್ಮಯ ಎನ್ನುವಂಥ ಸಾಧನೆ ಮಾಡಿ ಸುದ್ದಿಯಾಗಿದ್ದಾರೆ. ಸಾರಾ ಇಲ್ಲರ್ ಹೆಸರಿನ ಗರ್ಭಿಣಿ ಪತಿ ಮ್ಯಾಟ್ ರೈಡರ್ ಜತೆಗೆ ಕಾರಿನಲ್ಲಿ ಕೇಪ್ ಗಿರಾರ್ಡ್‌ಎಯು ನಗರದಲ್ಲಿರುವ ಪಾಪ್ಯುಲರ್ ಆಸ್ಪತ್ರೆಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಸಾರಾ ಇದ್ದ ಕಾರಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಈ ದಂಪತಿ ತೀವ್ರವಾಗಿ ಗಾಯಗೊಂಡರು. ಸಾರಾ ಚಿಕಿತ್ಸೆಗಾಗಿ ಹೋಗುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದರು. ಆದರೆ ಗರ್ಭಿಣಿ ಸಾರಾ ಸಾವು ಖಚಿತ ಪಡಿಸಿಕೊಂಡ ವೈದ್ಯರ ತಂಡ ತಕ್ಷಣ ಶಸ್ತ್ರಚಿಕಿತ್ಸೆ ಮೂಲಕ ಶಿಶುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಮಗು ಎರಡುವರೆ ಕೆಜಿ ಇದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.