ಹೈದರಾಬಾದ್ ಪುರುಷರಿಗೆ ಸಿಕ್ಕಾಪಟ್ಟೆ ಟೆನ್ಶನ್

ಬೆಂಗಳೂರು, ಚೆನ್ನೈ, ಮುಂಬಯಿ ಮುಂತಾದ ದೇಶದ ಇತರ ನಗರಗಳ ಪುರುಷರಗಿಂತ ಹೈದರಾಬಾದ್‌ನ ಪುರುಷರು ಅತಿ ಹೆಚ್ಚಿನ ಮಟ್ಟದ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಚಿವಾಲಯ ಬಿಡುಗಡೆ ಮಾಡಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೪ (೨೦೧೫-೨೦೧೬) ವರದಿಯಿಂದ ಈ ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿದೆ. ಅತ್ಯಧಿಕ ರಕ್ತದೊತ್ತಡ-ವೆರಿ ಹೈ ಹೈಪರ್‌ಟೆನ್ಶನ್ (ವಿಎಚ್‌ಎಚ್)ನಿಂದ ಬಳಲುವ ಪುರುಷರ ಸಂಖ್ಯೆ ಹೈದರಾಬಾದ್ (ಶೇ.೪.೫),ಚೆನ್ನೈ(ಶೇ.೩), ಬೆಂಗಳೂರು(ಶೇ.೦.೭), ಕೋಲ್ಕೊತ್ತಾ(ಶೇ.೦೫). ೧೭ ರಾಜ್ಯಗಳ ಸುಮಾರು ೨೦,೦೦೦ ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ರಕ್ತದೊತ್ತಡ ಮಟ್ಟ ೧೮೦-೧೧೦ ಇರುವವರನ್ನು ಅತ್ಯಧಿಕ ರಕ್ತದೊತ್ತಡದ ವಿಭಾಗಕ್ಕೆ ಸೇರಿಸಲಾಗಿದೆ. ಆರೋಗ್ಯವಂತರ ರಕ್ತದೊತ್ತಡ ೧೪೦-೯೦ಗಿಂತ ಕಡಿಮೆ ಇರಬೇಕು. ಮಧುಮೇಹ, ಹೃದ್ರೋಗ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುವವರ ರಕ್ತದೊತ್ತಡ ೧೩೫-೮೫ಗಿಂತ ಕಡಿಮೆ ಇರಬೇಕು ಎಂದು ತಜ್ಞರು ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.