ಮೇ 22ಕ್ಕೆ ಇರಾನ್ ಪ್ರವಾಸ

ಕೆಲವು ವಾರಗಳ ಹಿಂದೆಯಷ್ಟೇ ಇರಾನ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮೇ ೨೨ರಿಂದ ಎರಡು ದಿನಗಳ ಕಾಲ ಇರಾನ್ ಪ್ರವಾಸ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಇರಾನ್‌ಗೆ ನೀಡಬೇಕಾದ ಕಚ್ಚಾತೈಲದ ಬಾಕಿ ಹಣ ೬.೫ ಬಿಲಿಯನ್ ಡಾಲರ್ ಮೊತ್ತವನ್ನೂ ಪಾವತಿಸಲಿದ್ದಾರೆ. ಬಾಕಿ ಮೊತ್ತವನ್ನು ಭಾರತ ಯುರೋಗಳಲ್ಲಿ ನೀಡಲಿದೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರಿ ಸೌರಭ್ ಕುಮಾರ್ ತಿಳಿಸಿದ್ದಾರೆ. ಭಾರತ ಕಚ್ಚಾ ತೈಲ ಆಮದಿನಲ್ಲಿ ಪ್ರಮುಖ ದೇಶವಾಗಿದ್ದು, ಕಳೆದ ಏಪ್ರಿಲ್ ೧ರ ಬಳಿಕ ದಿನಕ್ಕೆ ೪ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.