ಭಾರಿ ಮಳೆಯಾಗುವ ಸಂಭವ: ಮುನ್ಸೂಚನೆ

Advt_NewsUnder_1
Advt_NewsUnder_1
Advt_NewsUnder_1

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಳ್ಳುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಶ್ರೀಲಂಕಾ, ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರತ ಕುಸಿತ ತೀವ್ರಗೊಂಡಿದೆ. ಸದ್ಯ ಅದು ಆಗ್ನೇಯ ಚೆನ್ನೈ ನಗರದತ್ತ ಧಾವಿಸುತ್ತಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಸ್.ಬಾಲಚಂದ್ರನ್ ಅವರು ತಿಳಿಸಿದ್ದಾರೆ. ಮುಂದಿನ ೨೪ರಿಂದ ೪೮ ಗಂಟೆಗಳಲ್ಲಿ ವಾಯುಭಾರ ಕುಸಿತ ಮತ್ತಷ್ಟು ತೀವ್ರಗೊಳ್ಳಲಿದೆ. ಇದರ ಪರಿಣಾಮ ಉತ್ತರ ತಮಿಳುನಾಡು, ಪುದುಚೆರಿ, ದಕ್ಷಿಣ ಆಂಧ್ರ ಪ್ರದೇಶ, ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.