ಮುನ್ನೆಚ್ಚರಿಕೆ ವಹಿಸಲು ಡಿಸಿ ಸೂಚನೆ

ಮುಂಬರುವ ಮಳೆಯಿಂದಾಗಿ ಸಂಭವಿಸುವ ನೆರೆಪೀಡಿತ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮ ಹಾಗೂ ಪರಿಹಾರ ವಿತರಣಾ ಕುರಿತು ಮಾಹಿತಿಯನ್ನು ಒಂದು ವಾರದೊಳಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಮಳೆಗಾಲ ಸಿದ್ಧತೆಯ ಬಗ್ಗೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುಂಗಾರು ಮಳೆ ಪ್ರವೇಶಿಸಿದೆ. ಮಳೆಯಿಂದಾಗಿ ನೆರೆ ಸಂಭವಿಸುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಬೇಕು. ಯಾವುದೇ ರೀತಿಯ ಮುನ್ನೆಚ್ಚರಿಕೆ ಕುರಿತು ಜನರಿಗೆ ಮಾಹಿತಿ ನೀಡಬೇಕು. ಅದೇ ರೀತಿಯ ಜಿಲ್ಲಾಡಳಿತಕ್ಕೆ ಮಳೆಯ ಬಗ್ಗೆ ಪ್ರತಿದಿನ ತಹಶೀಲ್ದಾರ್ ಮಾಹಿತಿ ನೀಡಬೇಕು ಹಾಗೂ ತುರ್ತುಸಂದರ್ಭದಲ್ಲಿ ಪೊಲೀಸ್, ಹೋಂಗಾರ್ಡ್, ತುರ್ತುಸಹಾಯ ಪಡೆಗಳ ಸಂಭವಿಸುವ ಅಪಘಾತದಲ್ಲಿ ಕೈಜೋಡಿಸ ಬೇಕೆಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.