ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಸುಳ್ಯ ಹೊರ ವಲಯದ ಕಾಂತಮಂಗಲ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ರವಿರಾಜ ಎಂಬವರ ಪತ್ನಿ ಕುಸುಮ(೪೦) ತನ್ನ ಮಕ್ಕಳಾದ ಲಿಖಿತಾ, ರಕ್ಷಿತಾ ಹಗೂ ಸುಜನ್ ಅವರೊಂದಿಗೆ ಮನೆ ಸಮೀಪ ಹರಿಯುವ ಪಯಸ್ವಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಅಪರಾಹ್ನ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದ್ದು, ಸಂಜೆ ವೇಳೆಗೆ ಪರಿಸರದವರಿಗೆ ವಿಷಯ ತಿಳಿದುಬಂದಿದ್ದು, ಬಳಿಕ ನಾಲ್ಕೂ ಮೃತದೇಹಗಳನ್ನು ಮೇಲೆತ್ತಲಾಯಿತು. ಘಟನೆಗೆ ಕಾರಣ ತಿಳಿದು ಬಂದಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.