ಉಪ್ಪಿನಂಗಡಿ : ಅಕ್ರಮ ಗೋಮಾಂಸ ಸಾಗಾಟ ಪತ್ತೆ ಆರೋಪಿ ಬಂಧನ, ಮಾಂಸ, ಓಮ್ನಿ ವಶಕ್ಕೆ

Advt_NewsUnder_1
Advt_NewsUnder_1

 ಉಪ್ಪಿನಂಗಡಿ : ಬೇಲೂರಿನಲ್ಲಿ ಬಿ.ಸಿ ರೋಡ್‌ನಿಂದ ಓಮ್ನಿ ವಾಹನವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೋಲೀಸರು ಆರೋಪಿಯನ್ನು ಬಂಧಿಸಿ ಓಮ್ನಿ ಹಾಗೂ ಗೋಮಾಂಸ ವಶಕ್ಕೆ ತೆಗೆದುಕೊಂಡಿದ್ದಾರೆ.
ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ನಿವಾಸಿ ಪಿ. ಕೆ ಅಬ್ದುಲ್ ಬಶೀರ್ (೩೨) ಬಂಧಿತ ಆರೋಪಿ. ಈತ ಮೇ ೧೭ರಂದು ಬೆಳಗಿನ ಜಾವ ಬೇಲೂರ್ ಕಡೆಯಿಂದ ಬಿ.ಸಿ ರೋಡ್‌ಗೆ ಓಮ್ನಿ (ಕೆಎ ೧೯ ಎಂಇ ೫೭೫೦)ಯಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೋಲಿಸರು ಉಪ್ಪಿನಂಗಡಿ ನೇತ್ರಾವತಿ ಸೇತುವೆ ಬಳಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದು ಈ ವೇಳೆ ೧೦೫ ಕೆ.ಜಿ ಗೋಮಾಂಸ ಪತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೋಲೀಸರು ೧೦೫ ಕೆ.ಜಿ ಗೋಮಾಂಸ ಹಾಗೂ ಇದರ ಸಾಗಾಟಕ್ಕೆ ಬಳಸಿದ್ದ ಓಮ್ನಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಪ್ಪಿನಂಗಡಿ ಠಾಣೆ ಎಎಸ್‌ಐ ರತ್ನಕುಮಾರ್ ನೇತೃತ್ವದಲ್ಲಿ ಕಾರ‍್ಯಾಚರಣೆ ನಡೆದಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.