ಎಸ್ಸೆಸ್ಸೆಲ್ಸಿ: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಶುಶೃತ್ ಭಟ್‌ಗೆ ಸ್ಟೇಟ್‌ಬ್ಯಾಂಕ್‌ನಿಂದ ಆರ್ಥಿಕ ಪ್ರೋತ್ಸಾಹ

Advt_NewsUnder_1
Advt_NewsUnder_1

sushruth prashasthi ಬೆಳ್ತಂಗಡಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ೬೨೫ ರಲ್ಲಿ ೬೨೪ ಅಂಕಗಳನ್ನು ಪಡೆದು ತಾಲೂಕಿಗೆ ಮೊದಲಿಗನೆನಿದ್ದಲ್ಲದೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಲಾಲದ ಸೈಂಟ್ ಮೇರಿಸ್ ಸಂಸ್ಥೆಯ ವಿದ್ಯಾರ್ಥಿ ಶುಶೃತ್ ಭಟ್ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆ ೧೦ ಸಾವಿರ ರೂ ನಗದು ನೀಡಿ ಪ್ರೋತ್ಸಾಹಿಸಿದೆ. ಮೇ. ೧೮ ರಂದು ಶಾಲೆಗೆ ಆಗಮಿಸಿದ ಬೆಳ್ತಂಗಡಿ ಶಾಖೆಯ ಮುಖ್ಯಪ್ರಬಂಧಕ ಸತ್ಯಚಂದ್ರನ್ ಪಿ. ಎಂ ವಿದ್ಯಾರ್ಥಿ ಶುಶೃತ್ ಅವರಿಗೆ ಬ್ಯಾಂಕಿನ ಎಟಿಎಂ ಕಾರ್ಡನ್ನು ಹಸ್ತಾಂತರಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜಿನ್ಸಿ ದೇವಸ್ಯ, ಮತ್ತು ಸಿಸ್ಟರ್ ಕ್ರಿಸ್ಟಿನಾ, ಬ್ಯಾಂಕಿನ ಸಹಾಯಕ ಪ್ರಬಂಧಕರಾದ ಮಧುಜಿತ್ ಮತ್ತು ಪ್ರಭಾತ್ ಕುಮಾರ್, ವಿದ್ಯಾರ್ಥಿಯ ತಾಯಿ , ಶಿಕ್ಷಕಿಯಾಗಿರುವ ಸುರೇಖಾ, ಸಹೋದರಿ ಸುಶೀರಾ ಅವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.