ವೃದ್ಧಾಶ್ರಮದಲ್ಲಿ ಮಹಾತ್ಮ ಗಾಂಧಿ ಮೊಮ್ಮಗ

ವಿಶ್ವಕ್ಕೆ ಅಹಿಂಸೆ ತತ್ತ್ವ ಬೋಧಿಸಿ, ದೇಶಕ್ಕೆ ಸ್ವತಂತ್ರ ದೊರಕಿಸಿಕೊಟ್ಟ ಅಗ್ರಗಣ್ಯ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧಿ. ಆದರೆ, ವಿಪರ್ಯಾಸ ನೋಡಿ ಈ ಮಹಾನ್ ನಾಯಕನ ತೊಡೆಯ ಮೇಲೆ ಆಡಿ ಬೆಳೆದ ಗಾಂಧೀಜಿ ಮೊಮ್ಮಗ ೮೭ ವಯಸ್ಸಿನ ಕನ್ನುಬಾಯಿ ರಾಮ್ದಾಸ್ ಗಾಂಧಿ ತಮ್ಮ ಕೊನೆಯ ದಿನಗಳನ್ನು ೮೫ ವರ್ಷದ ಪತ್ನಿ ಡಾ.ಶಿವ ಲಕ್ಷ್ಮಿ ಜೊತೆ ದೆಹಲಿಯ ವೃದ್ಧಾಶ್ರಮದಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಂಪತಿಗೆ ಮಕ್ಕಳಿಲ್ಲ. ತಮ್ಮ ಬದುಕಿನ ಬಹುತೇಕ ವರ್ಷಗಳನ್ನು ಅಮೆರಿಕಾದಲ್ಲಿ ಕಳೆದಿದ್ದಾರೆ. ಕನ್ನುಬಾಯಿ ವಿದ್ಯಾಭ್ಯಾಸದ ನಂತರ ಕೆಲ ಕಾಲ ಭಾರತೀಯ ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಂತರ ಅಮೆರಿಕಾದ ನಾಸಾದಲ್ಲಿ ಉದ್ಯೋಗ ಪಡೆದು ಅಲ್ಲೇ ತಮ್ಮ ಜೀವನವನ್ನು ಕಂಡುಕೊಂಡರು. ಆದರೆ ಬದುಕಿನ ಅಂತಿಮ ದಿನಗಳನ್ನು ತಾಯಿನಾಡಿನಲ್ಲಿ ಕಳೆಯುವುದಕ್ಕಾಗಿ ಭಾರತಕ್ಕೆ ಮರಳಿದರು. ತಮ್ಮ ಅಜ್ಜ ಮಹಾತ್ಮ ಗಾಂಧಿ ದೀನದಲಿತರಿಗಾಗಿ ನಿರ್ಮಿಸಿದ್ದ ಸಾಬರ್ಮತಿ ಆಶ್ರಮಕ್ಕೆ ತೆರಳಿ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ಆದರೆ ಸಾಬರ್ಮತಿ ಆಶ್ರಮದ ಮಾಲೀಕ ಬಲವಂತವಾಗಿ ಈ ದಂಪತಿಯನ್ನು ಹೊರಹಾಕಿದ್ದಾನೆ. ದಾರಿ ಕಾಣದ ದಂಪತಿ ಆಶ್ರಮದಿಂದ ನೇರವಾಗಿ ದೆಹಲಿಗೆ ಆಗಮಿಸಿ ಅಲ್ಲಿ ಗುರು ವಿಶ್ರಾಮ್ ವೃದ್ಧಾಶ್ರಮದಲ್ಲಿ ಬಂದು ನೆಲಸಿದ್ದಾರೆ. ವಿದೇಶದಲ್ಲಿ ಉತ್ತಮ ಬದುಕು ಕಂಡುಕೊಂಡಿದ್ದ ಇವರು  ೪೦ ಸಹಾಯಕರು ಸೇರಿದಂತೆ ೧೩೦ ವೃದ್ಧರ ಜೊತೆ ವಾಸಿಸುವ ಪರಿಸ್ಥಿತಿ ಒದಗಿಬಂದಿದೆ. ಈ ೧೩೦ ಮಂದಿಗೆ ಇರುವುದು ಕೇವಲ ೪ ಶೌಚಾಲಯ ಮಾತ್ರ. ಅಲ್ಲದೆ ಇಲ್ಲಿ ವಾಸಿಸುವ ಬಹುತೇಕರು ರೋಗಿಗಳು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.