ಯುವಜನತೆಗೆ ದೇಶ ರಕ್ಷಿಸುವ ಜವಾಬ್ದಾರಿ

ದೇವರು ನೀಡಿದ ವಿದ್ಯೆಯ ಅನುಗ್ರಹ ಹಾಗೂ ಸರಕಾರ ನೀಡುವ ವೇತನ, ಭತ್ತೆಗಳಲ್ಲಿ ತೃಪ್ತಿ ಕಂಡುಕೊಂಡು ಬಡವರ ಬದುಕು ಹಸನು ಮಾಡುವ ಮನಸ್ಸು ನಮ್ಮ ಸಮಾಜದಲ್ಲಿ ಕಾಣೆಯಾಗಿದೆ. ಇದರಿಂದ ಇಲ್ಲಿನ ಎಲ್ಲ ಕ್ಷೇತ್ರಗಳ ಹೆಚ್ಚಿನ ಜನರಿಗೆ ದುರಾಸೆಯ ಕಾಯಿಲೆ ಬಂದುಬಿಟ್ಟಿದೆ. ಅದು ನಮ್ಮ ಸಮಾಜದಲ್ಲಿ ಮಾನವೀಯತೆ ಮಾಯವಾಗುವಂತೆ ಮಾಡಿಬಿಟ್ಟಿದೆ. ಇದರಿಂದ ದೇಶವನ್ನು ರಕ್ಷಿಸುವ ಮತ್ತು ಮಾನವೀಯತೆಯ ಅಂತಃಕರಣವುಳ್ಳ ಸಮಾಜವನ್ನು ರೂಪಿಸುವ ಸವಾಲು ಹಾಗೂ ಜವಾಬ್ದಾರಿ ಇಂದಿನ ಯುವಪೀಳಿಗೆಗೆ ಇದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಕರೆ ನೀಡಿದ್ದಾರೆ. ಅವರು ಇಲ್ಲಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಾಲ್ಕನೇ ಪದವಿ ದಿನಾಚರಣೆ ಹಾಗು ಹಳೆ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.