ಸಿಡಿಲಿಗೆ ಹಾನಿ

Advt_NewsUnder_1
Advt_NewsUnder_1
Advt_NewsUnder_1

  ಬೆಳ್ತಂಗಡಿ :  ಕುಕ್ಕಳ ಗ್ರಾಮದ ಕೋಡಿಯೇಲು ಸವಿತಾ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮನೆ ಮಂದಿ ಕುಟುಂಬಿಕರ ಮನೆಗೆ ಹೋಗಿದ್ದರಿಂದ ಅವರಿಗೆ ಯಾವುದೇ ಅಪಾಯವಾಗಿಲ್ಲ. ಮನೆಯ ಗೋಡೆ ಬಿರುಕು ಬಿಟ್ಟಿದ್ದು ಹೆಂಚಿನ ಛಾವಣಿಗೆ ಹಾನಿಯಾಗಿದೆ. ವಿದ್ಯುತ್ ಪರಿಕರಗಳು ಸುಟ್ಟು ಹೋಗಿದೆ. ಮೂಡುಪಡುಕೋಡಿ ಗ್ರಾಮದ ಚಂದ್ರಶೇಖರ ಗೌಡ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಉಂಟಾಗಿದೆ. ಅವರ ಪತ್ನಿ ಸಿಡಿಲಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿನ ನಾರಾಯಣ ಭಂಡಾರಿ, ಪದ್ಮಾವತಿ, ಮಹಮ್ಮದ್, ಕುಸುಮ ಎಂಬವರ ವಾಸದ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ. ನಾವೂರು ಗ್ರಾಮದ ವೆಂಕಪ್ಪ ಮೂಲ್ಯ ಎಂಬವರ ಮನೆಗೆ ಹಾನಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.