ಬೆಳ್ತಂಗಡಿ ಟೆಲಿಕಾಂ ಇಲಾಖೆಯಲ್ಲಿ ಲೈನ್‌ಮ್ಯಾನ್ ಆಗಿದ್ದ ಕೆ. ಬಿ ಅಬ್ದುಲ್ ಖಾದರ್ ಹೃದಯಾಘಾತದಿಂದ ನಿಧನ

  abdul   ಬೆಳ್ತಂಗಡಿ: ಇಲ್ಲಿನ ಟೆಲಿಕಾಂ (ಬಿಎಸ್‌ಎನ್‌ಎಲ್) ಇಲಾಖೆಯಲ್ಲಿ ಲೈನ್‌ಮ್ಯಾನ್ ಆಗಿ ಚಿರಪರಿಚಿತರಾಗಿದ್ದ ಪಿಲಿಚಂಡಿಕಲ್ಲು ಸುನ್ನತ್‌ಕೆರೆ ನಿವಾಸಿ ಕೆ. ಬಿ ಅಬ್ದುಲ್ ಖಾದರ್ (53ವ.) ಅವರು ಮೇ. 9ರಂದು ಹೃದಯಾಘಾತಕ್ಕೊಳಗಾಗಿ ಮಂಗಳೂರಿನ ಬಾವನ ಮನೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಕೊಯ್ಯೂರು ಗ್ರಾಮದ ಆದೂರ್‌ಪೆರಾಲ್ ಭೀಮಂಡೆ ನಿವಾಸಿ ದಿ. ಅಬ್ಬಾಸ್ ಬ್ಯಾರಿ ಮತ್ತು ಅವ್ವಮ್ಮ ದಂಪತಿ ಪುತ್ರನಾಗಿದ್ದ ಅವರು ಪ್ರಸ್ತುತ ಸುನ್ನತ್‌ಕೆರೆಯಲ್ಲಿ ಸ್ವಂತ ಮನೆಮಾಡಿ ವಾಸವಾಗಿದ್ದರು. 1983 ರಿಂದ ಖಾಸಗಿ ಮತ್ತು ಇಲಾಖೆಯಲ್ಲಿ ದಿನಗೂಲಿ ನೌಕರರನಾಗಿ ವೃತ್ತಿ ನಡೆಸಿದ್ದ ಅವರು 1993 ರಿಂದ ಅಧಿಕೃತವಾಗಿ ಟೆಲಿಕಾಂ ಲೈನ್‌ಮ್ಯಾನ್ ಆಗಿ ನಿಯುಕ್ತಿಗೊಂಡು ಉಡುಪಿ, ಕುಂದಾಪುರ, ಮೂಡಬಿದ್ರೆ ಮೊದಲಾದೆಡೆ ಕೆಲಸ ಮಾಡಿದ್ದರು. ಪ್ರಸ್ತುತ ಬೆಳ್ತಂಗಡಿ ಟೆಲಿಕಾಂ ನಲ್ಲಿ ಲೈನ್‌ಮ್ಯಾನ್ ಆಗಿದ್ದರು.
ದೀರ್ಘ ವರ್ಷಗಳ ಹಿಂದ ಅಪಘಾತದಲ್ಲಿ ಆಗಿದ್ದ ಕಾಲಿನ ಚಿಕಿತ್ಸೆಗಾಗಿ ೩ ತಿಂಗಳ ಇಲಾಖಾ ರಜೆ ಪಡೆದುಕೊಂಡಿದ್ದ ಅವರು ಮಂಗಳೂರಿನ ಬಾವನ ಮನೆಯಲ್ಲಿ ಮತ್ತು ಚಿಕ್ಕಮಗಳೂರಿನ ನಾದಿನಿ ಮನೆಗೆ ಹೋಗಿ 10 ದಿನಗಳ ಬಳಿಕ ಆಗಬೇಕಾಗಿದ್ದ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಿದ್ದರು. ಈ ವೇಳೆ ಮೇ 9 ರಂದು ಬೆಳಿಗ್ಗೆ ಬಾವ ಯಾಕೂಬ್ ಅವರ ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸ್ನಾನ ಮಾಡಿ ಹೊರಬಂದವರೇ ನಿತ್ರಾಣಗೊಂಡು ಅಂಗಾತ ಮಲಗಿದವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಅವರು ಮೃತಪಟ್ಟಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಸಾತ್ವಿಕ ಸ್ವಭಾಗ ಮತ್ತು ಕರ್ತವ್ಯ ಪ್ರಜ್ಞೆಯುಳ್ಳವರಾಗಿದ್ದರು. ಶ್ರಮಜೀವಿಯಾಗಿದ್ದ ಅವರು ಎಲ್ಲ ಸಹೋದರಿಯರ ವಿವಾಹವನ್ನು ತಾನೇ ಕಷ್ಟಪಟ್ಟು ಮುಂದೆ ನಿಂತು ಮಾಡಿಸಿದ್ದರು.
ಮೃತರು ಪತ್ನಿ ರಹ್‌ಮತ್ ಚಿಬಿದ್ರೆ, ಪುತ್ರರಾದ ವಿದ್ಯಾರ್ಥಿಗಳಾಗಿರುವ ರಾಫಿಝ್, ರಿಫಾಝ್ ಮತ್ತು ರಾಝಿಕ್, ಪುತ್ರಿ ರಮೀಝಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಬೆಳ್ತಂಗಡಿ ಟೆಲಿಕಾಂ ಇಲಾಖೆಯ ಎಸ್. ಡಿ ಸೇರಿದಂತೆ ಎಲ್ಲಾ ಸಿಬಂದಿಗಳು, ಅನೇಕ ಮಂದಿ ಗಣ್ಯರು ಆಗಮಿಸಿ ಅಂತಿಮದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.