ಎತ್ತಿನಹೊಳೆ ಯೋಜನೆ ವಿರೋಧಿಸಿ ಮೇ ೧೬ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಸಮಾಲೋಚನಾ ಸಭೆ

   Nethravathi meeting copyಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಮತ್ತು ನದಿ ಉಳಿಸುವ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೇ 16 ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟದ ಭಾಗವಾಗಿ ಮೇ 5 ರಂದು ಬೆಳ್ತಂಗಡಿ ಸರಕಾರಿ ನೌಕರರ ಸಭಾಭವನದಲ್ಲಿ ಸಮಾಲೋಚನಾ ಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ನೇತ್ರಾವತಿ ಉಳಿಸಿ ಸಂಯುಕ್ತ ಹೋರಾಟ ಸಮಿತಿ ಸಂಚಾಲಕ ಸತ್ಯಜಿತ್ ಸುರತ್ಕಲ್, ಮಾರ್ಗದರ್ಶಕ ಮಂಡಳಿಯ ಎಂ.ಜಿ. ಹೆಗ್ಡೆ, ಶಶಿರಾಜ್ ಶೆಟ್ಟಿ ಕೊಳಂಬೆ ಮಾತನಾಡಿದರು. ಎತ್ತಿನಹೊಳೆ ರಾಜಕೀಯ ರಹಿತ ಹೋರಾಟ ಪಕ್ಷಗಳು, ಜಾತಿ, ಧರ್ಮ ಇತ್ಯಾದಿಗಳಿಲ್ಲ. ನಮ್ಮ ಜಿಲ್ಲೆಯ ಜೀವನದಿ ಉಳಿಸುವ ಕಾಯಕ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಜಿಲ್ಲಾ ಸಮಿತಿಯ ಪಿ.ಎ. ರಹೀಂ ಬಂಟ್ವಾಳ್, ಕೆ.ಎಸ್. ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಸಮಿತಿಯ ಸಂಚಾಲಕ ಪುಷ್ಪರಾಜ್ ಶೆಟ್ಟಿ, ಕಾರ್ಯದರ್ಶಿ ಶಶಿಕಿರಣ್ ಜೈನ್, ಸಹ ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್, ಕೋಶಾಧಿಕಾರಿ ಹರೀಶ್ ಪೂಂಜ, ವಿವಿಧ ಸಂಘಟನೆ ಹಾಗೂ ಪಕ್ಷದ ಮುಖಂಡರುಗಳಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಂಜನ್ ಜಿ. ಗೌಡ, ಬಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೋ, ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಬಜರಂಗದಳ ತಾಲೂಕು ಸಂಚಾಲಕ ದಿನೇಶ್ ಮುಗುಳಿ, ವಿಶ್ವ ಹಿಂದೂ ಪರಿಷತ್‌ನ ನವೀನ್ ನೆರಿಯ, ಬಿಜೆಪಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಣಾಲು, ಬಂಟರ ಸಂಘದ ಅದ್ಯಕ್ಷ ರಘುರಾಮ ಶೆಟ್ಟಿ ಸಾಧನಾ ಉಜಿರೆ, ಹೋಲಿ ರಿಡೀಮರ್ ಚರ್ಚ್‌ನ ಪಾಲನಾ ಮಂಡಳಿ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಪಿರೇರಾ, ಕುವೆಟ್ಟು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಆಚಾರ್, ರಫೀಕ್ ಮದ್ದಡ್ಕ, ಹಿಂದೂ ಜಾಗರಣ ವೇದಿಕೆಯ ಶ್ಯಾಮಸುಂದರ ನಡ, ತುಳುನಾಡು ಒಕ್ಕೂಟದ ಶೈಲೇಶ್ ಆರ್.ಜೆ, ಉದ್ಯಮಿ ರಾಜೇಶ್ ಶೆಟ್ಟಿ ಗುರುವಾಯನಕೆರೆ, ಜಯ ಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ಆಳ್ವ, ಬಿಜೆಪಿ ಯುವ ಮೋರ್ಚಾ ತಾ| ಅಧ್ಯಕ್ಷ ರಕ್ಷಿತ್ ಶೆಟ್ಟಿ, ಉದ್ಯಮಿ ಅಶೋಕ್ ಚಕ್ಕಿತ್ತಾಯ, ಗುತ್ತಿಗೆದಾರರಾದ ವಿಶ್ವನಾಥ್ ಲಾಲ, ಪ್ರಶಾಂತ್ ಮಡಂತ್ಯಾರ್, ಮುಂಡಾಜೆ ಯಂಗ್ ಚಾಲೆಂಜರ್ಸ್ ಸಂಚಾಲಕ ನಾಮದೇವ್ ರಾವ್ ಮುಂಡಾಜೆ, ಉದ್ಯಮಿ ನಾಗೇಶ್ ಪೈ, ದೇವಿ ಪ್ರಸಾದ್, ಭುವನೇಶ್ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಿಬಿ ಧರ್ಮಸ್ಥಳ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.