ಪಂಚಶ್ರೀ ಸಭಾ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೩ಲಕ್ಷ ರೂ. ದೇಣಿಗೆ ಹಸ್ತಾಂತರ

Advt_NewsUnder_1
Advt_NewsUnder_1

 Dharmasthaladinda dana sahaya copyಚಾರ್ಮಾಡಿ : ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪಂಚಶ್ರೀ ಸಭಾಭವನ ಇದರ ನಿರ್ಮಾಣಕ್ಕೆ ಪೂರಕವಾಗಿ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು 3 ಲಕ್ಷ ರೂ. ಗಳನ್ನು ಮಂಜೂರುಗೊಳಿಸಿದ್ದು ಸದ್ರಿ ಚೆಕ್ಕನ್ನು ದೇವಳ ಮತ್ತು ನಿರ್ಮಾಣ ಸಮಿತಿ ಮುಖಂಡರಿಗೆ ಹಸ್ತಾಂತರಿ ಸಲಾಯಿತು. ನೂತನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅನಂತರಾವ್ ಚಾರ್ಮಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ರಾವ್, ಗ್ರಾ. ಯೋಜನೆಯ ಶ್ರೀ ಪಂಚಲಿಂಗ ಒಕ್ಕೂಟದ ಅಧ್ಯಕ್ಷೆ ಶಾಲಿನಿ, ಮಾಜಿ ಅಧ್ಯಕ್ಷ ಹಾಗೂ ಚಾರ್ಮಾಡಿ ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ ಎಂ, ಶ್ರೀ ಮಹಾಮ್ಮಾಯಿ ಒಕ್ಕೂಟದ ಅಧ್ಯಕ್ಷ ಉಮೇಶ್ ಕುಮಾರ್, ನಿರ್ಮಾಣ ಸಮಿತಿ ಕಾರ್ಯದರ್ಶಿ ಕೇಶವ ಮೂಲ್ಯ, ಆಡಳಿತ ಸಮಿತಿ ಕಾರ್ಯದರ್ಶಿ ಗಣೇಶ್, ಗ್ರಾ. ಯೋ. ತಾ| ಯೋಜನಾಧಿಕಾರಿ ರೂಪಾ ಜಿ ಜೈನ್ ಮತ್ತು ಚಾರ್ಮಾಡಿ ವಲಯದ ಮೇಲ್ವಿಚಾರಕ ಚಿತ್ತರಂಜನ್, ಸೇವಾಪ್ರತಿನಿಧಿ ಉಷಾ ಅವರಿಂದ ಚೆಕ್ಕನ್ನು ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.