HomePage_Banner_
HomePage_Banner_

ಶ್ರೀ ವಿಶ್ವಕರ್ಮಾಭ್ಯುದಯ ಸಭಾದ ವಾರ್ಷಿಕೋತ್ಸವ ವಿದ್ಯೆ ಕಲಿಯಲು ಹಣ ಮಾತ್ರ ಇದ್ದರೆ ಸಾಲದು, ಪ್ರೋತ್ಸಾಹಿಸುವವರೂ ಬೇಕು: ಡಾ| ಪರಮೇಶ್ವರ

vishvakarma nataka copyಲಾಯಿಲ: ವಿದ್ಯಾ ಕ್ಷೇತ್ರದಲ್ಲಿ ಸಾಧನೆಗೆ ಹಣವೇ ಬೇಕೆಂದಿಲ್ಲ. ಕಲಿಯುವ ವಿದ್ಯಾರ್ಥಿಗೆ ಮನಸ್ಸು ಮತ್ತು ಅವರನ್ನು ಪ್ರೋತ್ಸಾಹಿಸುವವರು ಇದ್ದರೆ ಸಾಕು ಎಂದು ಮಂಗಳೂರು ವಿವಿ ವಾಣಿಜ್ಯ ವಿಭಾಗದ ಉಪನ್ಯಾಸಕ ಡಾ| ಪರಮೇಶ್ವರ ಆಚಾರ್ಯ ಹೇಳಿದರು.
ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಮೇ. 8ರಂದು ನಡೆದ ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಬೆಳ್ತಂಗಡಿ ಇದರ ವಾರ್ಷಿಕೋತ್ಸವ ಸಮಾರಂಭದ- 2016ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿಶ್ವಕರ್ಮ ಸಮುದಾಯ ತನ್ನ ಮೂಲವೃತ್ತಿಯಾಗಿರುವ ಚಿನ್ನ ತಯಾರಿ, ಮರದ ಕೆತ್ತನೆ ಇತ್ಯಾಧಿ ಸೂಕ್ಷ್ಮ ಕೌಶಲ್ಯದ ಜೊತೆ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಅಳವಡಿಸಿಕೊಳ್ಳವ ಮೂಲಕ ವೃತ್ತಿ ಕ್ಷೇತ್ರದಲ್ಲಿ ತಮಗೆ ಯಾರೂ ಪೈಪೋಟಿ ನೀಡದಂತೆ, ತಮ್ಮ ಅವಕಾಶಗಳನ್ನು ಯಾರೂ ಕಸಿದುಕೊಳ್ಳದಂತೆ ಅಥವಾ ತಮ್ಮನ್ನು ಮೀರಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಎಚ್ಚರಿಸುವ ಕೆಲಸವನ್ನು ಸಂಘ ಸಂಸ್ಥೆ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ ಮಾತನಾಡಿ, ಸಮುದಾಯ ಇಂದು ಕೇವಲ ೩, ೫ ಸೆಂಟ್ಸ್ ಮನೆಯಡಿಯ ಭೂಮಿ ಮಾತ್ರ ಸಾಕು ಎಂದು ತೃಪ್ತಿಪಟ್ಟುಕೊಂಡು ಸೀಮಿತ ಆಲೋಚನೆ ಮೂಲಕ ಜೀವನ ಸಾಗಿಸುತ್ತಿದ್ದು ದಿನದ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದನೆ ಮಾಡಿಕೊಂಡಿದ್ದರಿಂದ ಮೂಲ ಬಂಡವಾಳವಿಲ್ಲದೆ ಅಭಿವೃದ್ಧಿ ಹೊಂದುತ್ತಿಲ್ಲ. ಸಾಧನೆಯ ಮೂಲಕ ಭೂಮಿ ಹೆಚ್ಚಿಸಿಕೊಂಡು ಕೃಷಿ ವಗೈರೆ ಚಟುವಟಿಕೆಯನ್ನು ವೃದ್ಧಿಸಿಕೊಳ್ಳಬೇಕು. ರಾಜಕೀಯ ಇತರ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಬೇಕು. ನೀರಿನಲ್ಲಿ ಬೆಳೆದ ಹುಳವಾಗುವ ಬದಲು ಸವಾಲುಗಳನ್ನು ಎದುರಿಸುವ ಶಕ್ತಿಇರುವ ಉಪ್ಪಿನಕಾಯಿಯಲ್ಲಿನ ಹುಳವಾಗಲು ಪ್ರಯತ್ನಿಸಬೇಕು ಎಂದು ಉದಾಹರಣೆ ಸಮೇತ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ. ಕೆ ಸತೀಶ್ ಆಚಾರ್ಯ ಮಾತನಾಡಿ, ಸಮಾಜದ ಯುವಜನತೆ ಸಂಘಟನೆಗಾಗಿ ಕ್ರೀಡಾ ಕೂಟಗಳನ್ನೂ ಈ ಬಾರಿ ಆಯೋಜಿಸಲಾಗಿದ್ದು ಅಷ್ಟೂ ಜನ ಅದರಲ್ಲಿ ಭಾಗವಹಿಸಿದ್ದರು. ಅದೇ ರೀತಿ ಸಮುದಾಯದ ವಾರ್ಷಿಕೋತ್ಸವ ಮತ್ತು ಇತ್ಯಾದಿ ಚಟುವಟಿಕೆಗಳಲ್ಲೂ ಈ ಯುವನಜತೆ ಪೂರ್ಣವಾಗಿ ತೊಡಗಿಸಿಕೊಂಡರೆ ಯಾವ ಸಾಧನೆಗಳನ್ನೂ ಬೇಕಾದರೆ ಮಾಡಿತೋರಿಸಬಹುದು. ಅಂತೆಯೇ ಸಮುದಾ ಯಸ್ಥರೆಲ್ಲರೂ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಮುದಾಯದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿ ಸಂಜೆ ಬಹುಮಾನ ವಿತರಿಸಲಾಯಿತು. ಈ ವಿವರವನ್ನು ಗಣೇಶ್ ಆಚಾರ್ಯ ಬಲ್ಯಾಯಕೋಡಿ ನಿರ್ವಹಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಆಚಾರ್ಯ, ಕೋಶಾಧಿಕಾರಿ ಜಯರಾಮ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಗಣೇಶ್ ಆಚಾರ್ಯ, ಹಾಗೂ ಎಲ್ಲಾ ಸದಸ್ಯರು ಸಹಕರಿಸಿದರು.
ಕಾರ್ಯದರ್ಶಿ ಮೋಹನ್ ಕೆ ಆಚಾರ್ಯ ವರದಿ ವಾಚಿಸಿದರು. ಸದಾನಂದ ಆಚಾರ್ಯ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಆಚಾರ್ಯ ಸಂಜಯನಗರ ಪ್ರಾರ್ಥನೆ ಹಾಡಿದರು. ಜತೆ ಕಾರ್ಯದರ್ಶಿ ಯೋಗೀಶ್ ಆಚಾರ್ಯ ವಂದನಾರ್ಪಣೆಗೈದರು. ಸಭೆಯ ಬಳಿಕ ಸಯಾಮಿ ಕುಣಿತ, ಎಂ. ಕೆ ಸೀತಾರಾಮ ಕುಲಾಲ್ ವಿರಚಿತ ತುಳು ಸಾಂಸಾರಿಕ ನಾಟಕ ನಾಟಕದಾಯೆ ಪ್ರದರ್ಶನಗೊಂಡಿತು. ಅಲ್ಲದೇ ಇದೇ ಸಂದರ್ಭ ವಿವಿಧ ಕಾರ್ಯಕ್ರಮಗಳ ಪ್ರಾಯೋಜಕರನ್ನು ಗುರುತಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.