ಪಡಿತರಕ್ಕೆ ಆಧಾರ್ ಜೋಡಿಸದಿದ್ದರೆ ಪಡಿತರ ಸಾಮಾಗ್ರಿ ಖೋತ?

Advt_NewsUnder_1
Advt_NewsUnder_1

  ಬೆಳ್ತಂಗಡಿ: ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ ಪಡಿತರ ಸಾಮಾಗ್ರಿ ಖೋತ ಆಗಲಿದೆ. ಕೇಂದ್ರ ಸರಕಾರವು ಆಧಾರ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ ಪಡಿತರ ಚೀಟಿಗೂ ಆಧಾರ್ ಕಡ್ಡಾಯವಾಗಿದೆ.
ರಾಜ್ಯದ ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರು ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದಿದ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡಲು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಮೇ ೧೫ ರೊಳಗೆ ಸಲ್ಲಿಸುವಂತೆ ಗಡುವು ನೀಡಲಾಗಿತ್ತು. ಬೆಳ್ತಂಗಡಿ ತಾಲೂಕಿನಲ್ಲಿ ಕೆಲವೊಂದು ಕುಟುಂಬದ ಸದಸ್ಯರು ಆಧಾರ್ ಸಂಖ್ಯೆಯ ವಿವರವನ್ನು ನೀಡಿಲ್ಲವೆನ್ನಲಾಗಿದೆ. ಇಂತಹ ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಆಧಾರ್ ಸಂಖ್ಯೆಯ ಮಾಹಿತಿಯನ್ನು ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಗಳಿಗೆ ಕೂಡಲೇ ನೀಡುವಂತೆ ಆಹಾರ ಇಲಾಖೆಯು ತಿಳಿಸಿದೆ. ಒಂದು ವೇಳೆ ಪಡಿತರ ಚೀಟಿಯ ಆಧಾರ್ ಸಂಖ್ಯೆ ನೀಡದಿದ್ದಲ್ಲಿ ,ಮುಂಬರುವ ದಿನಗಳಲ್ಲಿ ಪಡಿತರ ಸಾಮಾಗ್ರಿಗಳು ಖೋತವಾಗಲಿದೆ.
ಬಹಳಷ್ಟು ಮಂದಿ ಈಗಾಗಲೇ ಪಡಿತg ಚೀಟಿಗೆ ಆಧಾರ್ ಸಂಖ್ಯೆಯನ್ನು ನೀಡಿದ್ದಾರೆ./ ಮಾಹಿತಿಯ ಕೊರತೆ ಹಾಗೂ ನಾನಾ ಕಾರಣಗಳಿಂದ ಮತ್ತೆ ಕೆಲವು ಕುಟುಂಬಗಳು ಆಧಾರ್ ಸಂಖ್ಯೆಯನ್ನು ನೀಡಿಲ್ಲವೆನ್ನಲಾಗುತ್ತಿದೆ. ಪಡಿತರ ಚೀಟಿಗೆ ಆಧಾರ್ ಜೋಡಣೆಯಿಂದ ಅಕ್ರಮ ಕಾರ್ಡುಗಳು ಪತ್ತೆ ಹಾಗೂ ಬಿಪಿಎಲ್, ಎಪಿಎಲ್ ಪ್ರತ್ಯೇಕಿಸಲು, ಸಹಕಾರಿಯಾಗಲಿ ಎಂದು ಹೇಳಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.