ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಹೃದಯಾಘಾತದಿಂದ ನಿಧನ

  Jayanthi nada copy

ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ  ಕಿಟ್ಟು ನಳಿಕೆಯವರ ಪತ್ನಿ ಜಯಂತಿ ಹೃದಯಾಘಾತದಿಂದ ಮೇ ೧೧ ರಂದು ನಿಧನರಾಗಿದ್ದಾರೆ. ಪತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಬೆಳ್ತಂಗಡಿ ತಾಲೂಕು ನಡ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿದ್ದ ಶ್ರೀಮತಿ ಜಯಂತಿ ಅವರು ಮೇ ೧೧ ರ ಕಳೆದ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ಮೃತ ಪಟ್ಟಿದ್ದಾರೆ. ಮಧುಮೇಹ ರೋಗ ಇದ್ದ ಅವರು ಇದೇ ಖಾಯಿಲೆ ಉಲ್ಭಣಿಸಿದ್ದ ಪರಿಣಾಮವಾಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಎಂದಿನಂತೆ ರಾತ್ರಿ ಊಟ ಮುಗಿಸಿದ್ದ ಅವರು ಕುಡಿಯಲು ನೀರು ಬೇಕೆಂದು ಕೇಳಿ ಅವರೇ ತೆಗೆದುಕೊಳ್ಳಲು ಹೋಗುತ್ತಿದ್ದ ವೇಳೆ ಸ್ಥಳದಲ್ಲೇ ಕುಸಿದು ಬಿದ್ದರು ಅಲ್ಲೇ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು . ಭಾರತೀಯ ಜನತಾ ಪಾರ್ಟಿಯ ಬೆಂಬಲಿತರಾಗಿದ್ದು ಇವರು ನಡ ಗ್ರಾಮ ಪಂಚಾಯತ್ ಈ ಹಿಂದಿನ ಅವಧಿಯಲ್ಲೂ ಸದಸ್ಯರಾಗಿ ಒಂದು ಬಾರಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. ಈ ವರ್ಷ ಮೀಸಲಾತಿ ಆಧಾರದಲ್ಲಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಇವರು ನಡ ಗ್ರಾಮದ ಮೂಡಾಯಿಗುತ್ತು ಶಾಲೆ ಬಳಿ ನಿವಾಸಿಯಾಗಿದ್ದು ಪತಿ ಮತ್ತು ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.