HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಿನೂತನ ಪ್ರತಿಭಟನೆ

ತುಳುನಾಡ ರಕ್ಷಣಾ ವೇದಿಕೆಯು ಮಂಗಳವಾರದಂದು ಮಂಗಳೂರು ಮಹಾನಗರ ಪಾಲಿಕೆಯ ಎದುರುಗಡೆ ನೀರು ಕೊಡಿ ಅಥವಾ ಹುದ್ದೆ ಬಿಡಿ ಎಂಬ ಶೀರ್ಷಿಕೆಯಡಿ ಬೃಹತ್ ಜನಜಾಗೃತಿ ಸಭೆ ಹಾಗೂ ಪ್ರತಿಭಟನಾ ಸಭೆಯ ಮೂಲಕ ಆಂದೋಲನವನ್ನು ಪ್ರಾರಂಬಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪು ನೀರು ಜೀವ ಸಂಕುಲದ ಅವಿಭಾಜ್ಯ ಅಂಗ, ನೀರಿಲ್ಲದೆ ಜೀವವಿಲ್ಲ, ಪ್ರಕೃತಿದತ್ತವಾಗಿ ಹಾಗೂ ಉಚಿತವಾಗಿ ದೊರಕುವ ನೀರು ಇಂದು ನಮ್ಮ ಮಂಗಳೂರಿನಲ್ಲಿ ಹಣ ಕೊಟ್ಟರೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಕೃತಕ ಬರಗಾಲ ಸೃಷ್ಟಿಯಾಗಿದೆ, ನೀರಿನ ಅಭಾವ ಎಲ್ಲೆಂದರಲ್ಲಿ ಕಾಣ ಸಿಗುತ್ತಿದೆ, ಜನರಿಗೆ ಸಿಗಬೇಕಾದ ನೀರನ್ನು ಜಿಲ್ಲೆಗೆ ಮಾರಕವಾದ ಎಂ.ಆರ್.ಪಿ.ಎಲ್, ಎಸ್.ಇ.ಝಡ್‌ನಂತಹ ಘಟಕಗಳಿಗೆ ಬೃಹತ್ ಮೊತ್ತದ ನೀರನ್ನು ದಿನ ನಿತ್ಯ ಪೂರೈಕೆಯಾಗುತ್ತಿದೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.