ಕಸರಹಿತ ಸ್ವಚ್ಛಗ್ರಾಮದ ಕನಸು

ಕಸ ರಹಿತ ಸ್ವಚ್ಛ ಗ್ರಾಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಳ ರಸ್ತೆಗಳ ಬದಿಯಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದ್ದು ರಸ್ತೆ ಬದಿಯಲ್ಲಿ ಕಸ ಹಾಕುವವರಿಗೆ ಗ್ರಾಪಂನಿಂದ ದಂಡ ವಿಧಿಸಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಮಂಗಳವಾರ ತುಂಬೆ ಸರಕಾರಿ ಶಾಲೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಾಹನವೊಂದರಲ್ಲಿ ತುಂಬೆ ಗ್ರಾಮದ ರಸ್ತೆ ಬದಿಯಲ್ಲಿ ಕಸ ತಂದು ಹಾಕುತ್ತಿದ್ದ ಹೊರಗಿನ ಜನರಿಗೆ ಈಗಾಗಲೇ ೫ ಸಾವಿರ ರೂ. ದಂಡ ವಿಧಿಸಲಾಗಿದೆ. ತುಂಬೆ ಗ್ರಾಮದಲ್ಲಿ ವಸತಿ ಸಮುಚ್ಚಯಗಳು ಹೆಚ್ಚುತ್ತಿದ್ದು ಗ್ರಾಮದ ಸ್ವಚ್ಛತೆಗೆ ಪಂಚಾಯತ್‌ನೊಂದಿಗೆ ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕೆಂದಿದ್ದಾರೆ. ಬಂಟ್ವಾಳ ಕೃಷಿ ಇಲಾಖಾಧಿಕಾರಿ ನೊಡಲ್ ಅಧಿಕಾರಿಯಾಗಿ ಕಲಾಪ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.