ಶ್ರೀ ಆಂಜನೇಯ ಸ್ವಾಮಿ ಮಂದಿರಕ್ಕೆ ಶಂಕು ಸ್ಥಾಪನೆ

raghavendra mata 1ಬೆಳ್ತಂಗಡಿ : ಲಾಯಿಲದ ಸೋಮಾವತಿ ನದಿ ತಟದಲ್ಲಿರುವ, ಶ್ರೀ ರಾಘವೇಂದ್ರ ಮಠದ ಆವರಣದಲ್ಲಿ, ಶ್ರೀ ಆಂಜನೇಯ ಸ್ವಾಮಿಯ ಶಿಲಾ ಪರಿಗ್ರಹ, ಶಿಲಾ ಪೂಜನ ಕಾರ್ಯಕ್ರಮವು ಮೇ.೨ರಂದು ಕ್ಷೇತ್ರದ ವೈದಿಕ ಗುರುಗಳಾದ ರಾಘವೇಂದ್ರ ಬಾಂಗಿಣ್ಣಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿತು.
ಈ ಮಹತ್ಕಾರ್ಯದ ದಾನಿಗಳಾದ ಬೆಂಗಳೂರಿನ ಹನುಮೇಗೌಡ, ವಿಶೇಷ ಅತಿಥಿಗಳಾಗಿ ಬನ್ನಿಕುಪ್ಪೆಯ ನಾರಾಯಣ ಬೇಗೂರವರು ಹಾಜರಿದ್ದರು. ಶ್ರೀರಾಯರ ಆರಾಧನ ಮಹೋತ್ಸವದ ಸಂದರ್ಭದಲ್ಲಿ ಉದ್ಘಾಟನೆಗೊಳ್ಳಲಿರುವ, ಮೂಲ ಶ್ರೀರಾಮ ದೇವರ ಭಕ್ತ ಶ್ರೀ ಆಂಜನೇಯನ ಮಂದಿರದ ಕನಸು ಭಕ್ತಾಧಿಗಳ ಹಲವು ವರ್ಷಗಳ ಕನಸಾಗಿತ್ತು ಎಂದು ನಿವೃತ್ತ ಎಸ್.ಪಿ. ಪ್ರತಿಷ್ಠಾನದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆಯವರು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿಶ್ವನಾಥ ಆರ್. ನಾಯಕ್, ಕೋಶಾಧಿಕಾರಿ ಶೇಖರ ಬಂಗೇರ, ಜೊತೆ ಕಾರ್ಯದರ್ಶಿ ಶಂಕರ ಹೆಗ್ಡೆ, ಗಣ್ಯರಾದ ಹೇರಾಜೆ ಉಮೇಶ್ ಬಂಗೇರ ಬೆಂಗಳೂರು, ಸೋಮೇಗೌಡ, ಮಹಾಬಲ ಶೆಟ್ಟಿ, ವಸಂತ ಸುವರ್ಣ, ಕೃಷ್ಣ ಶೆಟ್ಟಿ, ಲತಾ ನಾಗೇಶ್, ಸುರೇಶ್ ಶೆಟ್ಟಿ ಹಾಗೂ ರಾಘವೇಂದ್ರ ನಗರದ ಹಲವಾರು ಗಣ್ಯರು ಹಾಜರಿದ್ದರು.
ಶಿಲ್ಪಿಗಳಾದ ಕೃಷ್ಣಪ್ಪ ಮತ್ತು ಪುರುಷೋತ್ತಮ ಮೇಸ್ತ್ರಿಯವರ ಮೇಲ್ವಿಚಾರಣೆಯಲ್ಲಿ ಹನುಮ ಮಂದಿರದ ಕೆಲಸ ಕಾರ್ಯಗಳು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.