94ಸಿಸಿ ನಿಯಮದಡಿ ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸಲು ಅವಕಾಶ : ಮುಗುಳಿ

Advt_NewsUnder_1
Advt_NewsUnder_1
Advt_NewsUnder_1

Muguli Narayana Bhat New copyಬೆಳ್ತಂಗಡಿ : ನಗರ ಪ್ರದೇಶದಲ್ಲಿ 94ಸಿಸಿಯಡಿ ಮನೆ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ನೀಡಿದೆ ಎಂದು ನಗರ ಪಂಚಾಯತದ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಗರ ಪಂಚಾಯತು ವ್ಯಾಪ್ತಿಯಲ್ಲಿ ಅನೇಕ ಮಂದಿ ಅನಧಿಕೃತವಾಗಿ ಮನೆ ನಿರ್ಮಿಸಿ ಹಲವು ವರ್ಷಗಳಿಂದ ವಾಸ್ತವ್ಯವಿದ್ದಾರೆ. ಈ ಹಿಂದೆ ಸರಕಾರ ನಗರ ವ್ಯಾಪ್ತಿಯಲ್ಲಿ ೯೪ಸಿಸಿ ಯಲ್ಲಿ ಅಕ್ರಮ ನಿವೇಶನ ಸಕ್ರಮಕ್ಕೆ ಅರ್ಜಿ ಆಹ್ವಾನಿಸಿದ್ದರೂ, ಬೆಳ್ತಂಗಡಿ ನೆಮ್ಮದಿ ಕೇಂದ್ರದಲ್ಲಿ ಕೆಲ ತಾಂತ್ರಿಕ ಕಾರಣದಿಂದ ಕಂಪ್ಯೂಟರ್‌ನಲ್ಲಿ ಓಪನ್ ಆಗದೆ ಇಲ್ಲಿಯ ನಗರ ನಿವಾಸಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.
ಇದೀಗ ನಗರ ಪಂಚಾಯತು ವ್ಯಾಪ್ತಿಯಲ್ಲಿ ೯೪ಸಿಸಿಯಲ್ಲಿ ಅರ್ಜಿ ಸಲ್ಲಿಸಲು ಮತ್ತೆ ಸರಕಾರ ಆದೇಶ ಮಾಡಿದ್ದು, ಈಗ ಬೆಳ್ತಂಗಡಿ ಅಟಲ್‌ಜೀ ನೆಮ್ಮದಿ ಕೇಂದ್ರದಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಲಾಗುತ್ತಿದೆ. ಅರ್ಹ ನಗರ ನಿವಾಸಿಗಳು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ, ತಮ್ಮ ಜಾಗದ ಅಕ್ರಮವನ್ನು ಸಕ್ರಮ ಮಾಡಿಕೊಂಡು ಹಕ್ಕು ಪತ್ರವನ್ನು ಪಡೆದುಕೊಳ್ಳಬಹುದು. ಈಗಾಗಲೇ ಮನೆ ಕಟ್ಟಿ ಹಲವು ವರ್ಷಗಳಿಂದ ವಾಸ್ತವ್ಯವಿರುವವರು ನಿಗದಿತ ನಮೂನೆಯ ಅರ್ಜಿಯ ಜೊತೆಗೆ ತಮ್ಮ ಭಾವಚಿತ್ರ, ಪಡಿತರ ಚೀಟಿ, ವೋಟರ್ ಐಡಿಯ ಪ್ರತಿ, ತಮ್ಮ ಜಾಗದ ಆರ್.ಟಿ.ಸಿ(ಸರಕಾರಿ ಜಾಗ), ಮನೆ ತೆರಿಗೆ ರಶೀದಿ ಅಥವಾ ವಾಸ್ತವ್ಯ ಧೃಡಪತ್ರ, ಹಾಗೂ ಇತರ ಪೂರಕ ದಾಖಲೆಗಳನ್ನು ನೀಡಬೇಕು. ನಗರ ವ್ಯಾಪ್ತಿಯ ನಿವಾಸಿಗಳಿಗೆ ಇದು ಸದಾವಕಾಶವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.