ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಿಯ ಬಾಲಾಲಯ ಪ್ರತಿಷ್ಠೆ

chankuru devastana 1 copy

chankuru devastna copy ಲಾಯಿಲ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದ್ದು ಶ್ರೀ ದೇವಿಯ ಬಾಲಾಲಯ ಪ್ರತಿಷ್ಠೆಯು ಹಾಗೂ ರಕ್ತೇಶ್ವರಿ ದೇವಿಯ ಪ್ರತಿಷ್ಠೆಯು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ನಡೆಯಿತು.
ಆ ಪ್ರಯುಕ್ತ ಮೇ ೧ರಂದು ಸಂಜೆ ತಂತ್ರಿಗಳ ಆಗಮನವಾಗಿ ಬಾಲಾಲಯ ಶುದ್ಧಿ, ವಾಸ್ತು ರಾಕ್ಷೋಘ್ನ, ವಾಸ್ತುಬಲಿ ಹಾಗೂ ಮೇ ೨ರಂದು ಬೆಳಿಗ್ಗೆ ಬಿಂಬ ಶುದ್ಧಿ, ಅನುಜ್ಞಾ ಕಲಶಪೂಜೆ, ಮತ್ತು ರಕ್ತೇಶ್ವರೀ ದೈವದ ಪ್ರತಿಷ್ಠೆ ೧೦-೦೯ರ ಮಿಥುನ ಲಗ್ನದಲ್ಲಿ ಶ್ರೀ ದೇವಿಯ ಬಾಲಾಲಯ ಪ್ರತಿಷ್ಠೆ ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಕರಸೇವೆ ಮೂಲಕ ದೇವಸ್ಥಾನವನ್ನು ಬಿಚ್ಚಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.