ಬಳ್ಳಮಂಜದಲ್ಲಿ ಮೇಷ ಜಾತ್ರೆ ಸಂಪನ್ನ

Advt_NewsUnder_1
Advt_NewsUnder_1
Advt_NewsUnder_1

ballamanja ratha 1

ballamanja ratha copyಬಳ್ಳಮಂಜ : ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎ. 23ರಿಂದ ಮೇ 2ರ ವರೆಗೆ ಮೇಷ ಜಾತ್ರೆ ಬಹಳ ವಿಜೃಂಭಣೆಯಿಂದ ಜರಗಿತು.
ಎ. ೩೦ರಂದು ಬೆಳಿಗೆ ದರ್ಶನ ಬಲಿ, ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬ ರಿಂದ ಮಹಾ ರಥೋತ್ಸವ, ಮಹಾಪೂಜೆ, ಶ್ರೀ ಭೂತಬಲಿ ದೈರೆಬೈಲು ಶಿವಪ್ರಸಾದ್ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ವೇ. ಮೂ| ಕೇಶವ ಜೋಗಿತ್ತಾಯ, ಅನುವಂಶಿಯ ಆಡಳಿತ ಮೊಕ್ತೇಸರರಾದ ಡಾ| ಹರ್ಷ ಸಂಪಿಗೆತ್ತಾಯ, ಸಂಜೀವ ಶೆಟ್ಟಿ ಮುಗೆರೋಡಿ, ಮೋನಪ್ಪ ಪೂಜಾರಿ ಕಂಡೆತ್ತ್ಯಾರು, ನಾರಾಯಣ ಪೂಜಾರಿ ಹೊಸಮನೆ, ಸತೀಶ್ ಕಾರಂದೂರು, ಪ್ರಮೋದ್ ಕುಮಾರ್, ರಾಮಪ್ರಸಾದ್ ಸಂಪಿಗೆತ್ತಾಯ, ಅಶೋಕ್ ಸಂಪಿಗೆತ್ತಾಯ, ಅನಂತರಾಮ ಜೋಗಿತ್ತಾಯ, ಮಾಧವ ಜೋಗಿತ್ತಾಯ, ನಾರಾಯಣ ನಾವಡ, ಬಾಲಕೃಷ್ಣ, ನ್ಯಾಯವಾದಿ ಹರೀಶ್ ಪೂಂಜ ವಿಶ್ವನಾಥ ಕಾರಂದೂರು, ವಿಠಲ ಶೆಟ್ಟಿ ಮೂಡಯೂರು, ದಿನೇಶ್ ಆಚಾರ್ಯ, ಮಡಂತ್ಯಾರು ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪಿ., ಮಚ್ಚಿನ ಗ್ರಾ.ಪಂ. ಅಧ್ಯಕ್ಷೆ ಹರ್ಷಲತಾ ಹಾಗೂ ಗ್ರಾ.ಪಂ. ಸದಸ್ಯರು, ಸಿಬ್ಬಂದಿವರ್ಗ ಮೊದಲಾದ ಗಣ್ಯರು, ಭಕ್ತಾದಿಗಳು, ಸೇವಾ ಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.