ಕೆಳ್ಕರೇಶ್ವರ ದೇವರ ಗುಂಡಿಯಲ್ಲಿ ಸಾಯುತ್ತಿರುವ ಮೀನುಗಳು ನದಿಯಲ್ಲಿ ನೀರಿನ ಕೊರತೆ : ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kelkara meenu (3)

kelkara meenu (2)ಕರಂಬಾರು : ಕರಂಬಾರು ಗ್ರಾಮದ ಶ್ರೀ ಕೆಳ್ಕರೇಶ್ವರ ದೇವಸ್ಥಾನದ ಬಳಿಯ ದೇವರ ಮೀನುಗಳ ಗುಂಡಿಯಲ್ಲಿ ಇದೇ ಮೊದಲ ಬಾರಿಗೆ ತೀವ್ರ ನೀರಿನ ಕೊರತೆ ಎದುರಾಗಿದ್ದು ಮೀನುಗಳು ಒತ್ತಡಕ್ಕೊಳಗಾಗಿ ಸಾವನ್ನಪ್ಪುತ್ತಿರುವ ಆತಂಕಕಾರಿ ವಿಷಯ ತಿಳಿದುಬಂದಿದೆ. ಇದರಿಂದಾಗಿ ಪರಿಸರದಲ್ಲಿ ದುರ್ವಾಸನೆ ಕೂಡ ಬೀರುತ್ತಿದ್ದು ಇನ್ನಷ್ಟು ದಿನಗಳು ಮಳೆ ಬಾರದಿದ್ದರೆ ಅಪಾರ ಪ್ರಮಾಣದಲ್ಲಿರುವ ಮೀನುಗಳು ಸಂಪೂರ್ಣ ಸಾವನ್ನಪ್ಪಿ ಭಾರೀ ಆಘಾತಕಾರಿ ವಾತಾವರಣಕ್ಕೆ ಸಾಕ್ಷಿಯಾಗಲಿದೆ ಎಂಬ ಆತಂಕ ಭಕ್ತರು ಮತ್ತು ಸಾರ್ವಜನಿಕರಲ್ಲಿ ಮೂಡಿದೆ.
ಈ ನಡುವೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪಕ್ಷದ ತಾಲೂಕು ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ವಿಚಾರವನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ
ಬೆಳ್ತಂಗಡಿ ತಹಶಿಲ್ದಾರ್ ಪ್ರಸನ್ನಮೂರ್ತಿ, ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಸ್.ಎನ್. ಭಟ್ ಅವರಿಗೆ ಸೂಚನೆ ನೀಡಿದ ಬೆನ್ನಿಗೇ ತಾ.ಪಂ. ಇಒ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡಿರುವ ಅವರು ಪಿಡಿಒ ಎನ್.ಬಿ. ಚಟ್ನಳ್ಳಿ ಅವರಿಗೆ ನೀಡಿದ ಸೂಚನೆಯಂತೆ ಮೇ ೩ ರಂದು ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ೩೦ ಮೀಟರ್‌ನಷ್ಟು ದೂರದ ಇನ್ನೊಂದು ನೀರಿನ ಗುಂಡಿಗೆ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ. ಹೂಳೆತ್ತುವ ವೇಳೆ ಮರಳಿನ ಅಡಿಯಲ್ಲೂ ನೀರು ಲಭ್ಯವಾಗಿದ್ದು ಮೀನುಗಳಿಗೆ ಸ್ವಲ್ಪ ಪ್ರಮಾಣದ ನಿರಾಳತೆಯಾಗಿದೆ. ಆದರೆ ಮೇ ೪ ರಂದು ಮತ್ತೆ ಮೀನುಗಳು ಸಾವನ್ನಪ್ಪುತ್ತಿದೆ ಎಂದು ನವಾಝ್ ಶರೀಫ್ ಸುದ್ದಿಗೆ ತಿಳಿಸಿದ್ದಾರೆ. ಹೊಳೆಯಲ್ಲಿ ಅಪಾರ ಪ್ರಮಾಣದಲ್ಲಿ ಪೆರುವೊಲು, ಕೂರ್ಲು, ಕಿಜನ್, ಮಡಂಜಿ, ಪುರಿಯೊಲು ಸೇರಿದಂತೆ ಗ್ರಾಮೀಣ ಮೀನಿನ ತಳಿಗಳಿದ್ದು ದೇವರ ಗುಂಡಿಯಾಗಿರುವುದರಿಂದ ಇಲ್ಲಿ ಯಾರೂ ಮೀನಿನ ಬೇಟೆ ನಡೆಸುತ್ತಿಲ್ಲ. ಮೀನುಗಳ ಪೈಕಿ ಕೆಲವು ೧೦ ಕೆ.ಜಿ. ಗೂ ಹೆಚ್ಚು ತೂಕದ ಮೀನುಗಳೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯವಾಗಿ ದೇವಸ್ಥಾನ ಅಥವಾ ಹತ್ತಿರದಲ್ಲಿ ಎಲ್ಲಿಯಾದರೂ ಕೊಳವೆ ಬಾವಿ ಅಥವಾ ಇತರ ಜಲಮೂಲಗಳಿಂದ ಇಲ್ಲಿಗೆ ನೀರು ಹಾಯಿಸಿ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವ ಅವಕಾಶವಿದ್ದು ಈ ಬಗ್ಗೆ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ ಎಂದು ಇಲ್ಲಿನ ಜನ ಅಭಿಪ್ರಾಯಿಸಿದ್ದಾರೆ.
ದುರ್ವಾಸನೆ : ಮೀನುಗಳು ಒತ್ತಡಕ್ಕೊಳಗಾಗಿ ಸಾವನ್ನಪ್ಪುತ್ತಿದ್ದು ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಇಲ್ಲಿ ಸತ್ತ ಮೀನುಗಳನ್ನೂ ಕೂಡ ಯಾರೂ ಕೊಂಡೋಗುತ್ತಿಲ್ಲ. ಕೆಲವರು ಹೊಳೆ ಬದಿಯಲ್ಲೇ ಹೂಳುವ ಕೆಲಸವನ್ನೂ ಮಾಡಿದ್ದಾರೆ. ಆದರೆ ಅಷ್ಟೂ ಪ್ರಮಾಣದ ಮೀನುಗಳು ಸಾಯುತ್ತಿರುವುದರಿಂದ ಇದೂ ಕೂಡಾ ಅಸಾಧ್ಯದ ಮಾತಾಗಿದೆ.
ಪ್ರಾರಂಭದಲ್ಲಿ ಸ್ಥಳಕ್ಕೆ ಎಸ್‌ಡಿಪಿಐ ಕಾರ್ಯದರ್ಶಿ ನವಾಝ್ ಕಟ್ಟೆ ಅವರ ಜೊತೆಗೆ ಸ್ಥಳೀಯರಾದ ಪುರುಷೋತ್ತಮ ಪಿಲ್ಯ, ರಾಘವೇಂದ್ರ ಆಚಾರ್ಯ ಕರಂಬಾರು, ಸಂದೀಪ್, ಸತೀಶ್, ರಿಯಾಝ್, ಹಕೀಮ್, ಮುಹಮ್ಮದ್ ಕಟ್ಟೆ, ಇವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾಧ್ಯಮಕ್ಕೆ ಮತ್ತು ಅಧಿಕಾರಿಗಳಿಗೆ ಮಾಹಿತಿ ಲಭಿಸುವಂತೆ ಮಾಡಿದ್ದಾರೆ.

ಅಚ್ಚು ಮುಂಡಾಜೆ…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.