HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ದಿಡುಪೆ ಎಳನೀರು ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

 ಎಳನೀರು: ಮಲವಂತಿಗೆ ಗ್ರಾಮ ಪಂಚಾಯತಿನ ಗ್ರಾಮ ಸಭೆಯು ಎಳನೀರು ಪ್ರದೇಶದ ಉಕ್ಕುಡ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಸ್ಕರ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಎ. 28ರಂದು ಜರಗಿತು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೆಚ್.ಬಿ. ಜಯಕೀರ್ತಿ ಪ್ರಸ್ತಾವಿಕವಾಗಿ ಗ್ರಾಮ ಸಭೆಯ ಉದ್ದೇಶ ಮತ್ತು ಕಳೆದ ಗ್ರಾಮ ಸಭೆಯ ವರದಿಯನ್ನು ಸಭೆಗೆ ಮಂಡಿಸಿದರು. ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುಭಾಸ್ ಜಾಧವ್ ಗ್ರಾಮ ಸಭೆಯನ್ನು ನಡೆಸಿಕೊಟ್ಟರು.
ಗ್ರಾಮ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಇಲಾಖೆಯಿಂದ ದೊರೆಯುವ ಸೌಲಭ್ಯದ ಕುರಿತು ಸಭೆಗೆ ವಿವರಣೆ ನೀಡಿದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಸಭೆಗೆ ಗೈರು ಹಾಜರಾದ ಬಗ್ಗೆ ಪಂಚಾಯತ್‌ನ ಮಾಜಿ ಸದಸ್ಯ ಅರುಣ್ ಕುಮಾರ್ ಗಮನ ಸೆಳೆಯುವ ಸೂಚನೆಯನ್ನು ಮಂಡಿಸಿ ಗೈರು ಹಾಜರಾದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ ಮುಂದಿನ ಗ್ರಾಮಸಭೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು ಭಾಗವಹಿಸುವಂತೆ ತಾಲೂಕು ಪಂಚಾಯತ್ ಸದಸ್ಯರಾದ ಜಯರಾಮ ಆಲಂಗಾರು ಇವರಲ್ಲಿ ವಿನಂತಿ ಮಾಡಿಕೊಂಡರು.
ದಿಡುಪೆ ಎಳನೀರು ರಸ್ತೆಯನ್ನು ಕೂಡಲೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಸಮಲೋಚಿಸಿ ಸಹಭಾಗಿತ್ವದಲ್ಲಿ ದುರಸ್ಥಿ ಮಾಡಿಸುವಂತೆ ಎಳನೀರು ಭಾಗದ ಗ್ರಾಮಸ್ಥರು ಒತ್ತಾಯಪಡಿಸಿದರು.
೯೪ಸಿ ಅರ್ಜಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಕೂಡಲೆ ಅರ್ಜಿಯನ್ನು ವಿಲೇವಾರಿಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಲಾಯಿತು.
ಬಡಾಮನೆ ಎಂಬಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಕೇಂದ್ರವನ್ನು ಬದಲಿಸಬೇಕಾಗಿ ಮೆಸ್ಕಾಂ ಇಲಾಖೆಗೆ ಮನವಿ ಮಾಡಿದರು.
ಎಳನೀರು ಭಾಗದ ಗುತ್ಯಡ್ಕ ಶಾಲೆಯ ಹತ್ತಿರ ಮಿನಿ ಅಂಗನವಾಡಿ ಕಟ್ಟಡವನ್ನು ರಚನೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ವನ್ಯಜೀವಿ ಇಲಾಖಾಧಿಕಾರಿಗಳು ಕೆಲವು ಅರಣ್ಯ ಪ್ರದೇಶದ ಒಳಗೆ ವಾಸಿಸುತ್ತಿರುವ ಫಲಾನುಭವಿಗಳಿಗೆ ನೋಟಿಸು ನೀಡಿದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದು ಸಂಬಂಧಪಟ್ಟ ಇಲಾಖೆಗೆ ಪುನಃ ಜಾಗವನ್ನು ಸರ್ವೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಮಲವಂತಿಗೆ ಗ್ರಾಮದ ಕಜಕ್ಕೆ ಮತ್ತು ಕರಿಯಾಲು ಕುಡಿಯುವ ನೀರಿನ ಸರಬರಾಜು ಯೋಜನೆ ಕಳಪೆ ಕಾಮಗಾರಿಯಿಂದ ಕೂಡಿದ್ದು ಹಸ್ತಾಂತರವಾಗಿ ೨ ವರ್ಷವಾದರು ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗದ ಕಾರಣ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕೂಡಲೆ ದುರಸ್ಥಿಪಡಿಸುವಂತೆ ಇಲಾಖೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಎಳನೀರು ಭಾಗದ ಕುರೆಕಲ್ಲು ಪ್ರದೇಶದ ರಸ್ತೆಗಳನ್ನು ದುರಸ್ಥಿಪಡಿಸುವಂತೆ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಪಡಿಸಿದರು.
ಮಲವಂತಿಗೆ ಗ್ರಾಮ ಪಂಚಾಯತ್‌ನ ಸದಸ್ಯರಾದ ಪ್ರಕಾಶ್ ಕುಮಾರ್ ಇವರು ಪಡಿತರ ಚೀಟಿಯ ಸಮಸ್ಯೆಯ ಕುರಿತು ಸಭೆಯಲ್ಲಿ ಮಂಡಿಸಿದಾಗ ಅರುಣ್ ಕುಮಾರ್ ಇವರು ಧ್ವನಿಗೂಡಿಸಿ ಈ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ವಿನಂತಿಸಿಕೊಂಡರು.
ಸಭೆಯಲ್ಲಿ ಶ್ರೀಮತಿ ನೀಲಮ್ಮ ಕೋಂ ಎಲ್ಯಣ್ಣ ಮಲೆಕುಡಿಯ ಇವರಿಗೆ ಶೇ.೨೫ ಪ.ಜಾತಿ ಮತ್ತು ಪ.ಪಂಗಡದ ನಿಧಿಯಿಂದ ತುರ್ತು ವೈದ್ಯಕೀಯ ವೆಚ್ಚಕ್ಕಾಗಿ ೫,೦೦೦ ರೂ ನೀಡಲಾಯಿತು. ಶೇಕಡಾ ೩ ಅನುದಾನದಲ್ಲಿ ಕೃಷ್ಣಪ್ಪ ಮಲೆಕುಡಿಯ ಬಿನ್ ವೀರಪ್ಪ ಮಲೆಕುಡಿಯ ಕುರ್ಚಾರು ಇವರಿಗೆ ಅಂಗವಿಕಲ ನಿಧಿಯಿಂದ ದಿವಾನ್ ಮಂಚವನ್ನು ನೀಡಲಾಯಿತು. ಗ್ರಾಮ ಸಭೆಯಲ್ಲಿ ೨೦೧೫-೧೬ನೇ ಸಾಲಿನ ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮತ್ತು ಇಂದಿರಾ ಆವಾಜ್, ಅಂಬೇಡ್ಕರ್ ವಸತಿ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ವಿವರವಾಗಿ ಓದಿ ಹೇಳಲಾಯಿತು. ತಾಲೂಕು ಪಂಚಾಯತ್ ಸದಸ್ಯರಾದ ಜಯರಾಮ ಆಲಂಗಾರು ಇವರು ಗ್ರಾಮದ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾದ ಅಗತ್ಯತೆ ಇದೆ ಮತ್ತು ಪಕ್ಷ ಬೇಧ ಮರೆತು ಗ್ರಾಮದ ಅಭಿವೃದ್ಧಿಗೆ ಸಹಕರಿಸೋಣ ಎಂದು ತಿಳಿಸಿದರು. ಮಾರ್ಗದರ್ಶಿ ಅಧಿಕಾರಿ ಸುಭಾಸ್ ಜಾಧವ್ ಶಿಕ್ಷಣದ ಬಗ್ಗೆ ಮತ್ತು ಗ್ರಾಮ ಸಭೆಯ ಮಹತ್ವವನ್ನು ಸಭೆಗೆ ತಿಳಿಸಿದರು. ಅಧ್ಯಕ್ಷರಾದ ಭಾಸ್ಕರ ಪೂಜಾರಿ ಇವರು ಸುಗಮವಾಗಿ ಗ್ರಾಮಸಭೆ ನಡೆಯಲು ಸಹಕರಿಸಿದ ಗ್ರಾಮಸ್ಥರನ್ನು ಅಭಿನಂದಿಸಿದರು ಗ್ರಾ.ಪಂ. ಸದಸ್ಯ ಪ್ರಕಾಶ್ ಸ್ವಾಗತಿಸಿದರು. ಪಿ.ಡಿ.ಓ ಹೆಚ್.ಬಿ. ಜಯಕೀರ್ತಿ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.