ಮೇ 8: ಪಾರೆಂಕಿಯಲ್ಲಿ ಮಾಳವ ಯಾನೆ ಮಲ್ಲವ ಸಾಮ್ರಾಜ್ಯೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

malava samaja pressmeet copy ಬೆಳ್ತಂಗಡಿ : ಕೆಳದಿ ಸಂಸ್ಥಾನದ ಪರಂಪರೆಯಿಂದ ಬಂದ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ ಬೆಳ್ತಂಗಡಿ ಇದರ ವತಿಯಿಂದ ೨೦ನೇ ವರ್ಷದ ಮಲ್ಲವ ಸಾಮ್ರಾಜ್ಯೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಾಳವ ಯಾನೆ ಮಲ್ಲವ ಸಮಾಜ ಭವನದ ಶಿಲಾನ್ಯಾಸ ಮೊದಲಾದ ಕಾರ್ಯಕ್ರಮಗಳು ಮೇ.೮ರಂದು ಮಡಂತ್ಯಾರು ಪಾರೆಂಕಿಯ ಗಾಣದಕೊಟ್ಯ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶಿವಶಂಕರ್ ಹೇಳಿದರು.
ಅವರು ಎ.೩೦ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಗಾಣದಕೋಟ್ಯದಲ್ಲಿ ಸುಮಾರು ೧.೫೦ಕೋಟಿ ವೆಚ್ಚದಲ್ಲಿ ಮಾಹಾಕಾಳಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ೨೦ ಸೆಂಟ್ಸ್ ಸ್ಥಳವನ್ನು ಖರೀದಿಸಲಾಗಿದೆ. ಈಗ ಸಭಾ ಮಂಟಪ ನಿರ್ಮಾಣಕ್ಕೆ ಪುನಃ ೨೦ ಸೆಂಟ್ಸ್ ಜಾಗವನ್ನು ಖರೀದಿಸಲಾಗಿದೆ. ಇಲ್ಲಿ ದೇವಿಯ ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಮೇ.೮ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಲ್ಲವ ಸಾಮ್ರಾಜ್ಯದ ಗುರುಪರಂಪರನುಗತ ಕೆಳದಿ ಸಂಸ್ಥಾನ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನದ ಮಠಾಧ್ಯಕ್ಷರಾದ ಶಕ್ತಿ ವಿಶಿಷ್ಠಾದೈತ ವೇದಾಂದ ಆಚಾರ್ಯ ರಾಜಗುರು ಡಾ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮೀಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ವಸಂತ ಬಂಗೇರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ನಳಿನ್‌ಕುಮಾರ್ ಕಟೀಲ್, ಜಿ.ಪಂ ಸದಸ್ಯೆ ಮಮತಾ ಶೆಟ್ಟಿ, ತಾ.ಪಂ ಸದಸ್ಯೆ ವಸಂತಿ, ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ, ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಹೈಕೋರ್ಟು ನ್ಯಾಯವಾದಿ ಹರೀಶ್ ಪೂಂಜ, ಸಿ.ಎ ಬ್ಯಾಂಕ್ ಅಧ್ಯಕ್ಷ ಅರವಿಂದ ಜೈನ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಬ್ದುಲ್‌ರಹಿಮಾನ್ ಪಡ್ಪು, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ದೇವಸ್ಥಾನಗಳ ಧರ್ಮದರ್ಶಿಗಳು, ಮಲ್ಲವ ಯಾನೆ ಮಾಳವ ಸಮಾಜದ ಗಣ್ಯರು, ಕೆಳದಿ, ಶಿವಮೊಗ್ಗ ಪ್ರದೇಶದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ ಮಡಂತ್ಯಾರು ಪೇಟೆಯಿಂದ ಗಾಣದಕೊಟ್ಯ ತನಕ ಸ್ವಾಮೀಜಿ ಹಾಗೂ ಅತಿಥಿ ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸುವ ಕಾರ್ಯಕ್ರಮ ಇದೆ. ಬಳಿಕ ಗಾಣದಕೊಟ್ಯದಲ್ಲಿ ಮಾಳವ ಯಾನೆ ಮಲ್ಲವರ ಸಮಾಜಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮೋನಪ್ಪ, ಮಲ್ಲವ ಸಾಮ್ರಾಜೋತ್ಸವ ಸಮಿತಿಯ ಅಧ್ಯಕ್ಷ ಸಂಜೀವ ಹೆಗ್ಡೆ, ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಸಲಹೆಗಾರ ಕೃಷ್ಣ, ಯುವ ಸಮಿತಿಯ ಕಾರ್ತಿಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.