ತಾಲೂಕು ಕಚೇರಿಗೆ ಡಿಸಿ ಎ.ಬಿ. ಇಬ್ರಾಹಿಂ ಭೇಟಿ ಒಂದೇ ಸರ್ವೆ ನಂಬರ್‌ಗೆ ಇಬ್ಬರಿಗೆ ಭೂಮಿ ಮಂಜೂರು… ನಿವೃತ್ತ ಯೋಧ ಚಂದಪ್ಪ ಗೌಡರಿಗೆ ಇನ್ನೂ ಭೂಮಿ ಭಾಗ್ಯವಿಲ್ಲ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

DC AROGYA VICHARANE copy ಬೆಳ್ತಂಗಡಿ : ತಾಲೂಕು ಕಚೇರಿಯಲ್ಲಿ ಕಡತ ಮಾಯ ಪ್ರಕರಣಕ್ಕೆ ಇನ್ನೊಂದು ನಿದರ್ಶನ ಏ. 28ರಂದು ಬಯಲಾಗಿದೆ. ತೋಟತ್ತಾಡಿ ಗ್ರಾಮದ ಸಂಜೀವ ಪೂಜಾರಿ ಅವರಿಗೆ ೨೦೧೪ ರಲ್ಲಿ ಮಂಜೂರಾತಿಯಾಗಿರುವ ಜಾಗಕ್ಕೆ ಹಕ್ಕುಪತ್ತ, ಪಹಣಿ ಎಲ್ಲವೂ ಆಗಿದ್ದರೂ ಅದರ ನಕ್ಷೆ ಆಗ್ರಹಿಸಿ ಅವರು ತಾಲೂಕು ಕಚೇರಿಗೆ ನೀಡಿದ ಅರ್ಜಿಯ ವೇಳೆ ಅವರ ಕಡತವೇ ಮಾಯವಾದ ಬಗ್ಗೆ ಜಿಲ್ಲಾಧಿಕಾರಿಗಳ ಭೇಟಿ ವೇಳೆ ಬಯಲಾಗಿದೆ.
ಈ ಬಗ್ಗೆ ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡ ಡಿಸಿ ಅವರು ಇನ್ನೊಂದು ಕಡತ ತಯಾರು ಮಾಡುವಂತೆ ಆದೇಶ ನೀಡಿದರು.
ಕನ್ಯಾಡಿ ಗ್ರಾಮದ ಕಾಂತಪ್ಪ ನಾಯ್ಕ ಅವರಿಗೆ ೧೯೭೬ ರಲ್ಲಿ ಮಂಜೂರಾದ ೩.೧೩ ಎಕ್ರೆ ಜಾಗವು ಅದೇ ವಿಸ್ತೀರ್ಣಕ್ಕೆ ಮತ್ತು ಅಷ್ಟೇ ಅಳತೆಯಲ್ಲಿ ಕಂದಾಯ ಇಲಾಖೆ ಎಡವಟ್ಟಿನ ಕಾರಣದಿಂದ ಕೆಲವರ್ಷಗಳ ನಂತರ ಸುಬ್ಬರಾವ್ ಅವರಿಗೆ ಮಂಜೂರಾತಿಯಾಗಿರುವ ಪ್ರಕರಣವೂ ಈ ವೇಳೆ ಬಯಲಾಯಿತು. ಈ ಬಗ್ಗೆ ತಹಶಿಲ್ದಾರರು ಮತ್ತು ಭೂಮಾಪನಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಡಿಸಿ ಅವರು, ೩ ದಿನಗಳೊಳಗಾಗಿ ಸ್ಥಳಕ್ಕೆ ತೆರಳಿ ಅಳತೆ ಮಾಡಿ ಯಾರ‍್ಯಾರ ವಶದಲ್ಲಿ ಎಷ್ಟೆಷ್ಟು ಭೂಮಿ ಇದೆ ಎಂಬುವುದನ್ನು ದೃಢಪಡಿಸಬೇಕು. ಮತ್ತು ಮೊದಲೇ ಮಂಜೂರಾದ ಮಂಜೂರಾತಿದಾರರಿಗೆ ಧಕ್ಕೆಯಾಗದ ರೀತಿಯಲ್ಲಿ ಅದನ್ನು ಎರಡನೇಯವರಿಗೆ ಮಂಜೂರಾಗಿರುವ ಕ್ರಮವು ಅಸಂಪ್ರದಾಯಿಕ ಎಂದು ತಿಳಿಸಿ, ಅವಕಾಶವಿರುವುದಿಲ್ಲ ಎಂದು ಮತ್ತೆ ಪರಿಶೀಲನೆಗೆ ಹಾಕುವಂತೆ ತಿಳಿಸಿದರು. ಬಳಿಕ ಆಗಿರುವ ಮಂಜೂರಾತಿಯನ್ನು ತಡೆದು ಅವರ ವಶದಲ್ಲಿರುವ ಭೂಮಿಗೆ ಮಾತ್ರ ಮಂಜೂರಾತಿ ಕ್ರಮ ಜರುಗಿಸುವಂತೆ ಸೂಚಿಸಿದರು.
ಕಾರ್ಗಿಲ್ ಕದನದಲ್ಲಿ ಕಾಲು ಕಳೆದುಕೊಂಡಿರುವ ಮಾಜಿ ಸೈನಿಕ ಚಂದಪ್ಪ ಗೌಡ ಅವರು ೧೦ ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದರೂ ಅವರಿಗೆ ಭೂಮಿ ದೊರೆಯದ ಬಗ್ಗೆ ತೀವ್ರ ಅಸಮಾಧಾನಗೊಂಡ ಡಿಸಿ ಅವರು, ಹೈಕೋರ್ಟ್‌ನ ಆದೇಶದ ಮೇರೆಗೆ ಅವರಿಗೆ ಭೂಮಿ ಭಾಗ್ಯ ಕರುಣಿಸುವಂತೆ ಸಲಹೆ ನೀಡಿದರು. ಒಂದೆರಡು ದಿನಗಳ ವಾಯಿದೆ ಮಾತ್ರ ನೀಡಿ ಅದರೊಳಗೆ ಕ್ರಮ ಜರುಗಿಸುವಂತೆ ಆದೇಶಿಸಿದರು. ಮುಂದಿನ ಸಲ ನಾನು ಇಲ್ಲಿಗೆ ಬರುವಾಗ ಅವರೂ ಇಲ್ಲಿಗೆ ಬರುವ ಸನ್ನಿವೇಶ ಇರಬಾರದು ಎಂದರು.
ಚಿಬಿದ್ರೆ ಚರ್ಚ್‌ಗೆ ಸ್ಮಶಾನ ಭೂಮಿ ಮಂಜೂರು ಮಾಡಲು ಅಲ್ಲಿನ ಧರ್ಮಗುರುಗಳೇ ಅರ್ಜಿ ಹಿಡಿದು ಬಂದಿದ್ದರು. ಹಿಂದೆ ನೀಡಿದ ಅರ್ಜಿಗಳು ಫಲಪ್ರದವಾಗಿಲ್ಲ ಎಂದು ಅವರು ತಿಳಿಸಿದಾಗ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮತ್ತು ಅದು ಈಗಲೇ ನೀಡುವಂತೆಯೂ ತಿಳಿಸಿದರು. ಈ ಸಲಹೆಯನ್ನು ನೀಡಲು ವಿಳಂಭಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಾಗದ ವಿಚಾರವಾಗಿ ಡಿಸಿ ಅವರ ಬಳಿ ಮಾತನಾಡಲು ಬಂದಿದ್ದ ನೆರಿಯ ಗ್ರಾಮದ ಕಾಟಾಜೆ ನಿವಾಸಿ, ದೌರ್ಜನ್ಯ ಪ್ರಕರಣದ ಸಂತ್ರಸ್ತ ಸುಂದರ ಮಲೆಕುಡಿಯವ ಅವರ ಆರೋಗ್ಯ ವಿಚಾರಿಸಿದ ಡಿಸಿ ಅವರು ತುಂಡಾದ ಕೈ ಬೆರಳುಗಳನ್ನು ವೀಕ್ಷಿಸಿದರು. ಅವರಿಗೆ ವಿಕಲಾಂಗ ವೇತನ ನೀಡಲಾಗುತ್ತಿದೆಯೇ ಎಂದು ತಹಶಿಲ್ದಾರರನ್ನು ಪ್ರಶ್ನಿಸಿದರು. ಈ ವೇಳೆ ಆ ಬಗ್ಗೆ ನನಗೆ ಇದುವರೆಗೆ ತಿಳಿದೇ ಇಲ್ಲ ಸರ್ ಎಂದು ತಹಶಿಲ್ದಾರ್ ಪ್ರಸನ್ನಮೂರ್ತಿ ಅವರು ಉತ್ತರಿಸಿದಾಗ, ಇದು ಸರಿಯಾದ ಕ್ರಮವಲ್ಲ, ಅವರಿಂದ ಈಗಲೇ ಅರ್ಜಿ ಪಡೆದುಕೊಂಡು ಇಲ್ಲೇ ಅವರ ವರದಿ ತಯಾರಿಸಿ ಮಂಜೂರಾತಿಗೆ ಕ್ರಮ ವಹಿಸುವಂತೆ ಕಂದಾಯ ನಿರೀಕ್ಷಕ ರವಿ ಕುಮಾರ್ ಅವರಿಗೆ ಸೂಚಿಸಿ ಸ್ಥಳದಲ್ಲೇ ಅವರಿಗೆ ವಿಕಲಾಂಗ ವೇತನ ಮಂಜೂರುಗೊಳಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.