ಲಾಯಿಲದಲ್ಲಿ ಅಂತರ್ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

laila kumbarara kabaddi pandyata] copy

laila ushahi yuvaka mandala ushgatane copyಲಾಯಿಲ : ಉತ್ಸಾಹಿ ಯುವಕ ಮಂಡಲ ಲಾಯಿಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ಎ. ೩೦ರಂದು ಪಡ್ಲಾಡಿ ಶಾಲಾ ವಠಾರದಲ್ಲಿ ನಡೆದ ದ.ಕ, ಉಡುಪಿ, ಕೊಡಗು ಅಂತರ್ ಜಿಲ್ಲಾ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.೩೩,೩೩೩ ಹಾಗೂ ಉತ್ಸಾಹಿ ವರುಣ್ ಟ್ರೋಫಿಯನ್ನು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಪಡೆದುಕೊಂಡಿದೆ.
ದ್ವಿತೀಯ ಬಹುಮಾನ ರೂ.೨೨,೨೨೨ ಹಾಗೂ ಉತ್ಸಾಹಿ ವರುಣ್ ಟ್ರೋಫಿಯನ್ನು ಜೆಬಿಎಸ್‌ಸಿ ಕುಶಾಲನಗರ, ತೃತೀಯ ಬಹುಮಾನ ರೂ.೧೧,೧೧೧ ಮತ್ತು ಉತ್ಸಾಹಿ ವರುಣ್ ಟ್ರೋಫಿಯನ್ನು ವೈಸಿಎಸ್‌ಸಿ ಮುಂಡಾಜೆ, ಚತುರ್ಥ ಬಹುಮಾನ ರೂ.೧೧,೧೧೧ ಹಾಗೂ ಉತ್ಸಾಹಿ ವರುಣ್ ಟ್ರೋಫಿಯನ್ನು ಆಳ್ವಾಸ್ ಮೂಡಬಿದ್ರೆ ಪಡೆದುಕೊಂಡಿದೆ. ವರುಣ್ ಟ್ರಾವೆಲ್ಸ್ ತಂಡದ ಅಶಿಕ್ ಅಲ್‌ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಒಟ್ಟು ೨೧ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಪಂದ್ಯಾಟವನ್ನು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ರಂಜನ್ ಜಿ. ಗೌಡ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಪಾಂಡುರಂಗ ಭಂಡಾರ್ಕರ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಸುಧಾಕರ ಬಿ.ಎಲ್, ದ.ಕ ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ನಾಮದೇವ ರಾವ್, ಕಾರ್ಯದರ್ಶಿ ರಾಜಶೇಖರ ಶೆಟ್ಟಿ, ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್‌ಸುವರ್ಣ, ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ತೀರ್ಪುಗಾರ ಮಂಡಳಿ ಸಂಚಾಲಕ ಫ್ರಾನ್ಸಿಸ್ ವಿ.ವಿ, ಎಸ್.ಡಿ.ಎಂ.ಸಿ ಅಧ್ಯಕ್ಷ ನಿರಂಜನ್ ಜೈನ್, ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಎಲ್, ದಾನಿಗಳಾದ ಯೂಸುಫ್ ಹಾಜಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ, ಸಮಾಜ ಸೇವಕ ರುಕ್ಮಯ ಕನ್ನಾಜೆ, ಉರಗ ಪ್ರೇಮಿ ಅಶೋಕ್ ನಿನ್ನಿಕಲ್ಲು, ಹಿರಿಯ ಕಬಡ್ಡಿ ಆಟಗಾರ ಡ್ಯಾನಿ ತಾವ್ರೋ, ಜ್ಯೂನಿಯರ್ ನ್ಯಾಷನಲ್ ಕಬಡ್ಡಿ ಆಟಗಾರರಾದ ಮಹಮ್ಮದ್ ಅಕ್ರಮ್ ಮುಂಡಾಜೆ, ಮಹಮ್ಮದ್ ಸಿನಾನ್ ಮುಂಡಾಜೆ, ನಶಾದುದ್ದೀನ್ ಕುಕ್ಕೇಡಿ, ತುಳು ಚಲನಚಿತ್ರ ನಟ ಚೇತನ್ ರೈ ಮಾಣಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಗಿರೀಶ್ ಡೋಂಗ್ರೆ ಕಾರ್ಯಾಧ್ಯಕ್ಷ ವಿಜಯ ಫೆರ್ನಾಂಡೀಸ್, ಗೌರವಾಧ್ಯಕ್ಷ ವಿಲ್ಸನ್ ಸೋನ್ಸ್, ಕಾರ್ಯದರ್ಶಿ ದಿನಕರ ಗೌಡ, ಕೋಶಾಧಿಕಾರಿ ಶ್ರೀಧರ್ ಆರ್, ಸಂಚಾಲಕ ರಾಜೇಶ್ ಶೆಟ್ಟಿ, ಸಹ ಸಂಚಾಲಕರಾದ ಶಶಿಧರ ಪೈ, ಆರ್. ರಮೇಶ್, ತಾಂತ್ರಿಕ ಸಮಿತಿ ಸಂಚಾಲಕರಾದ ಜಯರಾಜ್ ಜೈನ್ ಮತ್ತು ಮಹೇಶ್ ಶೆಟ್ಟಿ ಲಾಯಿಲ ಉತ್ಸಾಹಿ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜನೆ ಅಧ್ಯಕ್ಷ ಹಾಗೂ ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಕೆ. ಗಿರೀಶ್ ಡೋಂಗ್ರೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಂಯೋಜಕ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ನಂತರ ಕಬಡ್ಡಿ ಪಂದ್ಯಾಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.