ರುಡ್‌ಸೆಟ್: ಸಮಾರೋಪ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

rudset tarabeti samaropa copyಧರ್ಮಸ್ಥಳ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನ್ಯಾಷನಲ್ ಅಕಾಡಮಿ ಆಯೋಜಿಸಿದ್ದ ೬೪ ನೇ ತಂಡದ ತರಬೇತುದಾರರ ತರಬೇತಿ ಕಾರ‍್ಯಕ್ರಮದ ಸಮಾರೋಪ ಸಮಾರಂಭವು ಧರ್ಮಸ್ಥಳದಲ್ಲಿ ನೆರವೇರಿತು.
ಈ ಕಾರ‍್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್ ಎಕಾಡಮಿಯ ಅಧ್ಯಕ್ಷರು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಆದ ಪದ್ಮವಿಭೂಣ ಡಾ. ಡಿ, ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು ವಿತರಿಸಿ ಆಶೀರ್ವಚನ ನೀಡುತ್ತಾ ರುಡ್‌ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್‌ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ ಸಹಯೋಗದೊಂದಿಗೆ ಸುಮಾರು ೬೦೦ ಸ್ವ ಉದ್ಯೋಗ ಕೇಂದ್ರಗಳನ್ನು ತೆರೆದಿದೆ ಎಂದು ರುಡ್‌ಸೆಟ್ ಸಂಸ್ಥೆಗಳ ಯಶೋಗಾತೆಯನ್ನು ವಿವರಿಸಿದರು.
ತರಬೇತಿಯ ಕುರಿತು ಅನಿಸಿಕೆಗಳನ್ನು ಕೇಳಿ ತರಬೇತುದಾರರ ಜವಾಬ್ದಾರಿಗಳನ್ನು ಮನವರಿಕೆ ಮಾಡಿದರು ಮತ್ತು ಅವಕಾಶಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ವೇದಿಕೆಯಲ್ಲಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆ, ರುಡ್‌ಸೆಟ್ ಕೇಂದ್ರಕಛೇರಿಯ ಅಧಿಕಾರಿಗಳಾದ ಟಿ.ಪಿ ಜಗದೀಶ ಮೂರ್ತಿ, ಅರುಣ ವಿ.ಜೆ ಹಾಗೂ ಅಕಾಡೆಮಿಯ ನಿರ್ದೇಶಕ ಗಂಗಾದರ ಮೂರ್ತಿ ಉಪಸ್ಥಿತರಿದ್ದರು. ಈ ಕಾರ‍್ಯಕ್ರಮದಲ್ಲಿ ದೇಶದಾದ್ಯಂತ ವಿವಿಧ ರಾಜ್ಯಗಳ ವಿವಿಧ ಬ್ಯಾಂಕುಗಳಿಂದ ಪ್ರಾಯೋಜಿಸಲ್ಪಟ್ಟ ಆರ್‌ಸೆಟಿ ಸಂಸ್ಥೆಗಳ ೧೬ ನಿರ್ದೇಶಕರು ಮತ್ತು ೨೩ ಉಪನ್ಯಾಸಕರುಗಳು ಬಾಗವಹಿಸಿದ್ದರು. ರುಡ್‌ಸೆಟ್ ನ್ಯಾಷನಲ್ ಅಕಾಡೆಮಿಯ ಡೈರೆಕ್ಟರ್ ಜನ್‌ರಲ್ ಎನ್. ಎಮ್. ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.