ಬೀಟ್ ರಾಕರ‍್ಸ್ ಡಾನ್ಸ್ ಅಕಾಡೆಮಿಯಿಂದ ಮನರಂಜಿಸಿದ ಡ್ಯಾನ್ಸ್ ಫ್ಲೇಮ್ ಕಾರ್ಯಕ್ರಮ

bit bounce dance copyಬೆಳ್ತಂಗಡಿ : ಬೀಟ್ ರಾಕರ‍್ಸ್ ಡಾನ್ಸ್ ಅಕಾಡೆಮಿ ಮತ್ತು ಶ್ರೀ ಸಾಯಿ ಕಾಸ್ಟೀಮ್ಸ್ ವರ್ಲ್ಡ್ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಡ್ಯಾನ್ಸ್ ಪ್ಲೇಮ್ ಸಿಲೆಬ್ರೆಟಿ ಡ್ಯಾನ್ ಶೋ ಸೀಸನ್-೫ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೈಕೋರ್ಟು ನ್ಯಾಯವಾದಿ ಹರೀಶ್ ಪೂಂಜ ವಹಿಸಿದ್ದರು. ಅತಿಥಿಗಳಾಗಿ ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ನಿವೃತ್ತ ಎಸ್.ಪಿ. ಪಿತಾಂಬರ ಹೇರಾಜೆ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಜೇಸಿ ವಲಯ ನಿರ್ದೇಶಕ ಚಿದಾನಂದ ಇಡ್ಯ, ಮಂಜುಶ್ರೀ ಜೇಸಿ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ರಾಮಣ್ಣ ಪೂಜಾರಿ ಕೋಟೆಗುತ್ತು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಯು.ಕೆ. ಹನೀಫ್, ಅಧ್ಯಕ್ಷ ಸಮಿತಾ ಫೆರ್ನಾಂಡೀಸ್, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಕಾರ್ಯದರ್ಶಿ ಶ್ರೀಮತಿ ದೀಪಾ, ಸಂಸ್ಥೆಯ ಮಾಲಕ ಜೀತೇಶ್ ಕುಮಾರ್ ಉಪಸ್ಥಿತರಿದ್ದರು. ಮಿಲನ ಧಾರಾವಾಹಿಯ ಪ್ರಶಾಂತ್(ಸಮರ್ಥ್), ಅನುರೂಪ ಧಾರಾವಾಹಿಯ ಕು| ಐಶ್ವರ್ಯ(ಮೇಘಾನಾ) ಹಾಗೂ ಪುಟಾಣಿ ಪಂಟ್ರು ಇದರ ಕೊರಿಯೋಗ್ರಾಫರ್ ಸುದರ್ಶನ್, ಶಿಫಾಲಿ ಮಂಗಳೂರು ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ತೌಸೀರ್ ಪರವಾಗಿ ಅವರ ಸಹೋದರ ತುಫೈಲ್ ಸನ್ಮಾನ ಸ್ವೀಕರಿಸಿದರು. ಈ ಸಮಯ ಸಂಸ್ಥೆಯ ಹೆಸರನ್ನು ಬೀಟ್ ರಾಕರ‍್ಸ್ ಡಾನ್ಸ್ ಅಕಾಡೆಮಿ ಎಂದು ಬದಲಾಯಿಸಲಾಯಿತು ಮತ್ತು ಶ್ರೀ ಸಾಯಿ ನಾಸಿಕ್ ಬ್ಯಾಂಡ್‌ನ್ನು ಉದ್ಘಾಟಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.