ಪೆರಿಂದಿಲೆ ಶಾಲಿನಿ ಶೆಟ್ಟಿ ಸವಿನೆನಪಿಗಾಗಿ ಶಾಲಿನಿ ಶೆಟ್ಟಿ ಸೇವಾ ಪ್ರತಿಷ್ಠಾನದ ಸಂಸ್ಥಾಪನೆ

 shalini 1 shalini 2 shalini 3 shalini 4 shalini 5ಬೆಳ್ತಂಗಡಿ: 2011 ನೇ ಮೇ ತಿಂಗಳಲ್ಲಿ ಮುಂಬೈಯ ಪತಿಯ ಮನೆಯಲ್ಲಿ ಪತಿಯ ಸಂಬಂಧಿಕ ವ್ಯಕ್ತಿಯಿಂದಲೇ ಅಮಾನುಷವಾಗಿ ಕೊಲೆಯಾಗಿದ್ದ 4.5 ತಿಂಗಳ ಗರ್ಭಿಣಿಯಾಗಿದ್ದ ಲಾಲ ಗ್ರಾಮದ ಪೆರಿಂದಿಲೆ ನಿವಾಸಿನಿ ಶಾಲಿನಿ ಶೆಟ್ಟಿ ಅವರ ಕೇಸು ನ್ಯಾಯಾಲಯದಲ್ಲೂ ಸೋಲಾದಾಗ ಆ ಬಗ್ಗೆ ನೋವು ಸಹಿಸಿಕೊಳ್ಳಲಾಗದಿದ್ದರೂ ಕಾನೂನಿನ ಹೋರಾಟದ ಬದಲಾಗಿ ಶಾಲಿನಿ ಶೆಟ್ಟಿ ಅವರ ಹೆಸರನ್ನು ಸಮಾಜದಲ್ಲಿ ಶಾಸ್ವತವಾಗಿ ಉಳಿಸುವ ನಿಟ್ಟಿನಲ್ಲಿ ಸೇವಾ ಚಟುವಟಿಕೆಗಳನ್ನು ಅನುಷ್ಠಾನಿಸಲು ಶಾಲಿನಿ ಸೇವಾ ಪ್ರತಿಷ್ಠಾನ ಸಂಸ್ಥಾಪಿಸಲಾಗಿದ್ದು ಅದರ ಉದ್ಘಾಟನೆಯು ಮೇ. ೩ ರಂದು ಲಾಲ ಶ್ರೀ ಗುರುರಾಘವೇಂದ್ರ ಮಠದ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಶಾಸಕ ವಸಂತ ಬಂಗೇರ ವಹಿಸಿದ್ದರು.
ಅಡ್ವೆ ಮೋಡ್ರಗುತ್ತು ಉದ್ಯಮಿ ಚಿತ್ತರಂಜನ್ ಶೆಟ್ಟಿ ಅವರು ಪ್ರತಿಷ್ಠಾನವನ್ನು ಉದ್ಘಾಟಿಸಿದರು.
ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ “ಸಾಧನಾ”, ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮೆ ಸಮಿತಿ ಪರವಾಗಿ ವಿಠಲ ಶೆಟ್ಟಿ ಮುಂಬೈ, ಕಲಾವಿದ ರಂಗಕರ್ಮಿ ವಿಜಯ ತಿಂಗಳಾಯಿ ಇವರುಗಳು ಅತಿಥಿಗಳಾಗಿದ್ದು ಮಾತನಾಡಿದರು.
ಸೇವಾ ಚಟುವಟಿಕೆಗಳ ಅನಾವರಣ, “ಶಾಲಿನಿಶ್ರೀ” ಪ್ರಶಸ್ತಿ ಪ್ರದಾನ:
ಪ್ರತಿಷ್ಠಾನದ ವತಿಯಿಂದ ಶಾಲಿನಿ ಶೆಟ್ಟಿ ಅವರ ಹೆಸರನ್ನು ಶಾಸ್ವತವಾಗಿ ಉಳಿಸಲು ಅರ್ಹರಿಗೆ ವಿದ್ಯಾಭ್ಯಾಸ, ವೈದ್ಯಕೀಯ ಇತ್ಯಾಧಿ ನೆರವು, ಸಾಂಸ್ಕೃತಿಕ ಪ್ರೋತ್ಸಾಹಗಳನ್ನು ಜಾತಿ ಭೇದವಿಲ್ಲದೆ ನೀಡುವ ಇರಾದೆ ಹೊಂದಲಾಗಿದ್ದು ಆ ಹಿನ್ನಲೆಯಲ್ಲಿ ವಿವೃತ ಸಿಸ್ಟರ್ ಜ್ಯೋತಿ ನವಮಣಿ ಸೋನ್ಸ್ ಪಡ್ಲಾಡಿ ಅವರಿಗೆ “ಶಾಲಿನಿಶ್ರೀ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಿಶಾ ಎಸ್ ಶೆಟ್ಟಿ ಅವರನ್ನು ಶೈಕ್ಷಣಿಕ ದತ್ತು ಸ್ವೀಕಾರ ಮಾಡಲಾಯಿತು. ವಿದ್ಯಾರ್ಥಿ ಕೌಶಿಕ್‌ರಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು. ಐಸಮ್ಮ ರಾಘವೇಂದ್ರನಗರ ಅವರಿಗೆ ಅಕ್ಕಿದಾನ ಮತ್ತು ಮೋಹಿನಿ ರಾಘವೇಂದ್ರ ನಗರ ಅವರಿಗೆ ಶಾಲಿನಿ ಶೆಟ್ಟಿ ಹೆಸರಿನಲ್ಲಿ ವಸ್ತ್ರದಾನ ಮಾಡಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಉದ್ಘಾಟನೆಯ ಅಂಗವಾಗಿ ಬಾಚಕೆರೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ಡಿ ಮನೋಹರ್ ಕುಮಾರ್ ವಿರಚಿತ “ಶ್ರೀಪತಿ ಶ್ರೀಮತಿ” ತುಳು ಸಾಂಸಾರಿಕ ಯಕ್ಷಗಾನ ಬಯಲಾಟ ಮತ್ತು ಸಾರ್ವಜನಿಕರಿಗೆ ಅನ್ನದಾನ ನಡೆಯಿತು.
ಆದರ್ಶ ಕಾಲೇಜು ಕಕ್ಕ್ಯೆಪದವು ಇಲ್ಲಿನ ಉಪನ್ಯಾಸಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಾಲಿನಿ ಶೆಟ್ಟಿ ಅವರ ಪತಿ ತಾರನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ್ ಶೆಟ್ಟಿ ಸ್ಮರಣ ಗೀತೆ ಹಾಡಿ ಪ್ರಾರ್ಥನೆ ಸಲ್ಲಿಸಿದರು. ಸುರೇಶ್ ಶೆಟ್ಟಿ ರಾಘವೇಂದ್ರ ನಗರ ಧನ್ಯವಾದವಿತ್ತರು. ಟ್ರಸ್ಟ್‌ನ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರಿಂದಿಲೆ, ಸಂಜೀವ ಶೆಟ್ಟಿ ರೇಷ್ಮೆರೋಡ್, ಶೇಖರ ಶೆಟ್ಟಿ, ರಾಜು ಶೆಟ್ಟಿ ಗುಜ್ಜೊಟ್ಟು ಮತ್ತು ದೀಪಕ್ ಶೆಟ್ಟಿ ಸೇರಿದಂತೆ ಎಲ್ಲಾ ಸದಸ್ಯರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.