ಯುವ ಪೀಳಿಗೆಯಲ್ಲಿ ಶ್ರದ್ಧೆ ಕುಂಠಿತ

ನಮ್ಮ ಹಿರಿಯರು ದೇವರಲ್ಲಿ ಅಚಲವಾದ ಶ್ರದ್ಧೆ, ವಿಶ್ವಾಸಗಳನ್ನು ಇಟ್ಟುಕೊಂಡಿದ್ದರು. ಬದುಕಿನ ಎಲ್ಲ ಸಂಕಷ್ಟಗಳಿಗೆ ದೇವರನ್ನೇ ಮೊರೆ ಹೋಗಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಈಗಿನ ಯುವ ಪೀಳಿಗೆಯವರಲ್ಲಿ ಅದು ಕಡಿಮೆಯಾಗಿದೆ ಎಂದು ಶ್ರೀ ಕಾಶೀ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದಿದ್ದಾರೆ. ಕಾರ್ಕಳದ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್‌ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನದಲ್ಲಿ, ಇಂದಿನ ಪೀಳಿಗೆಯವರು ತಮ್ಮ ಕಷ್ಟ ಪರಿಹಾರಕ್ಕಾಗಿ ಕಂಡ ಕಂಡ ದೇವರ ಮೊರೆ ಹೋಗುತ್ತಾರೆ. ಒಂದು ಕಡೆ ಆಗುತ್ತೋ ಇಲ್ಲವೋ ಎಂದು ಇನ್ನೊಂದು ಕಡೆ ತಡಕಾಡುತ್ತಾರೆ. ಅಚಲ, ಅಖಂಡವಾದ ಶ್ರದ್ಧೆ ಇಲ್ಲದಿರುವುದು ಇದಕ್ಕೆ ಕಾರಣ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.