ಹೊಸಂಗಡಿ: ಪಡ್ಡಂದಡ್ಕ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಜರಗಿದ ಬೃಹತ್ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ ಮತ್ತು ಎರ್ಮೋಡಿ ದಿ| ಗುಣಪಾಲ ಜೈನ್ ಸ್ಮರಣಾರ್ಥ ಗ್ರಾ.ಪಂ.ಗೆ ಪೈಬರ್ ಚಯರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂದರ ಕುಮಾರ್, ಮಂಗಳೂರಿನ ಖ್ಯಾತ ವೈದ್ಯ ಡಾ| ಶ್ರೀಧರ ಕಂಬಳಿ ಪೆರಿಂಜೆಗುತ್ತು, ಸರೋಜ ಜಿ. ಜೈನ್ ಎರ್ಮೋಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.