ವಿಮುಕ್ತಿ ಮಹಿಳಾ ಒಕ್ಕೂಟ ಸಾಮಾನ್ಯ ಸಭೆ

Advt_NewsUnder_1
Advt_NewsUnder_1
Advt_NewsUnder_1

vimukthi mahila okkuta samanya shabe copyಲಾಯಿಲ : ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಲಾಯಿಲ ಇದರ ಮಹಿಳಾ ಒಕ್ಕೂಟದ ಸಾಮಾನ್ಯ ಸಭೆ ಶ್ರೀಮತಿ ವಿಮಲರವರ ಅಧ್ಯಕ್ಷತೆಯಲ್ಲಿ ವಿಮುಕ್ತಿ ಕಛೇರಿಯಲ್ಲಿ ನಡೆಯಿತು. ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಾಗಿದ್ದು ಒಕ್ಕೂಟದ ಬಲವರ್ಧನೆ, ದಾಖಲಾತಿಗಳ ನಿರ್ವಹಣೆ, ಸ್ವ ಉದ್ಯೋಗ ಸಹಕಾರ ಮತ್ತು ಸರಕಾರಿ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸಂಸ್ಥೆಯ ಸಹ ನಿರ್ದೇಶಕರಾದ ವ. ಫಾ. ಅಮರ್ ಲೋಬೊರವರು ಮಾತನಾಡುತ್ತಾ ಎಲ್ಲಾ ಸದಸ್ಯರು ಸಮಯ ಪರಿಪಾಲನೆಯೊಂದಿಗೆ ಒಮ್ಮನಸ್ಸಿನಿಂದ  ಸಂಘಗಳ ನಿರ್ವಹಣೆ ಮಾಡಬೇಕು. ತಮ್ಮಿಂದ  ಮರುಪಾವತಿಸಲು ಸಾಧ್ಯವಾದಷ್ಟು ಮಾತ್ರ ಸಾಲವನ್ನು ಪಡೆದು ನಿಗದಿತ  ಸಮಯದೊಳಗೆ ಪಾವತಿಸಬೇಕು. ಸದಸ್ಯರು ಹೇಗೆ ತಮ್ಮ ಮನೆಯಲ್ಲಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಾರೋ ಹಾಗೇಯೇ ಸಂಘದಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಅದನ್ನು ನಿಭಾಯಿಸಿದಲ್ಲಿ ಸಂಘವು ಯಶಸ್ವಿಯಾಗಿ ಸಾಗುವುದರಲ್ಲಿ ಸಂಶಯವಿಲ್ಲ ಎಂದರು. ಶ್ರೀಮತಿ ಲತಾ ಸ್ವಾಗತಿಸಿ, ಶ್ರೀಮತಿ ಶಾಲಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.