ಬೆಳ್ತಂಗಡಿಯಲ್ಲಿ ಸುಸಜ್ಜಿತ ವಸ್ತ್ರ ಮಳಿಗೆ ಆನ್ ಸಿಲ್ಕ್ ಎ. 28ರಂದು ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

Ann Silks Belthangady copy

ಬೆಳ್ತಂಗಡಿ ತಾಲೂಕಿನಲ್ಲಿ ವಸ್ತ್ರ ವ್ಯಾಪಾರ ರಂಗದಲ್ಲಿ ಹೊಸ ಛಾಪು ಮೂಡಿಸುವ ಪ್ರಯತ್ನದಲ್ಲಿ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಜೆ.ಎಂ. ಕಾಂಪ್ಲೆಕ್ಸ್‌ನಲ್ಲಿ ಸುಸಜ್ಜಿತ ವಸ್ತ್ರಮಳಿಗೆ ಆನ್ ಸಿಲ್ಕ್ ಎ. 28ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ ಎಂದು ಮಾಲಕ ಯೇಸುದಾಸ್ ಎನ್.ಜಿ.ಯವರು ಎ.22ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 25,000 ಚದರ ಅಡಿಯಲ್ಲಿ ಮೂರು ಅಂತಸ್ತಿನ ಮಳಿಗೆಯಲ್ಲಿ ಮೊದಲ ಮಹಡಿಯಲ್ಲಿ ಮಹಿಳೆಯರಿಗೆ ಬೇಕಾದ ಉಡುಪುಗಳು, ಎರಡನೇ ಮಹಡಿಯಲ್ಲಿ ಮದುವೆ, ಸಮಾರಂಭಗಳಿಗೆ ಬೇಕಾದ ವಸ್ತ್ರಗಳು, ಮೂರನೇ ಮಹಡಿಯಲ್ಲಿ ಮಕ್ಕಳಿಗೆ ಮತ್ತು ಪುರುಷರಿಗೆ ಬೇಕಾದ ವಸ್ತ್ರ ಮಾರಾಟ ವ್ಯವಸ್ಥೆಯಿದೆ. ಮಳಿಗೆಯು ಪೂರ್ತಿ ಹವಾ ನಿಯಂತ್ರಿತವಾಗಿದ್ದು ಈಗಾಗಲೇ ೧೨೫ ಮಂದಿ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರು ಆಶೀರ್ವಾದ ವಿಧಿ ಹಾಗೂ ಆಶೀರ್ವಚನ ನೀಡಲಿದ್ದು. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಗಳೊಂದಿಗೆ ಶುಭಾರಂಭಗೊಳ್ಳಲಿದೆ. ಮಳಿಗೆಯನ್ನು ಬೆಳ್ತಂಗಡಿ ಶಾಸಕರಾದ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಪುತ್ತೂರು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ರೆ| ಫಾ| ಜಾಜ್ ಕಾಲಾಯಿ, ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್‌ನ ರೆ| ಫಾ| ಬೊನವೆಂಚರ್ ನಜ್ರೆತ್, ಬೆಳ್ತಂಗಡಿಯ ಕ್ಯೂ.ಜೆ.ಎಂ. ಖತೀಬರಾದ ಬಿ.ಎಂ. ಶಂಶುದ್ದೀನ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಮುಗುಳಿ ನಾರಾಯಣ ರಾವ್, ತಹಶೀಲ್ದಾರ್ ಪ್ರಸನ್ನ ಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಆರ್. ಲಿಂಗಪ್ಪ, ನ್ಯಾಯವಾದಿ ಸೇವಿಯರ್ ಪಾಲೇಲಿ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ರಂಜನ್ ಜಿ.ಗೌಡ, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ಸೌತ್ ಇಂಡಿಯನ್ ಬ್ಯಾಂಕಿನ ಮನೇಜರ್ ಜೊಬಿನ್ ಮ್ಯಾಥ್ಯೂ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಎಸ್. ಕುಲಾಲ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫಾ| ಬಿನೋಯ್ ಜೋಸೆಫ್, ಮಳಿಗೆಯ ಪಾಲುದಾರರಾದ ಶ್ರೀಮತಿ ಡೈನಾ ಯೇಸುದಾಸ್, ಮುಖ್ಯ ಪ್ರಬಂಧಕ ಅರುಣ್, ಖರೀದಿ ಪ್ರಬಂದಕ ಅನಿಲ್, ಸಿ.ಇ.ಓ. ನಿತಿನ್ ಉಪಸ್ಥಿತರಿದ್ದರು.

ಆನ್ ಸಿಲ್ಕ್‌ನ ವಿಶೇಷತೆಗಳು
ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಶರ್ಟ್ ಪ್ಯಾಂಟ್, ಮಕ್ಕಳ ಡ್ರೆಸಸ್ಸ್, ವಧು-ವರರ ಹೆಮ್ಮೆಯ ವಸ್ತ್ರ ವಿನ್ಯಾಸದ ಲೋಕ. ಪುರುಷರ ಹಾಗೂ ಮಹಿಳೆಯರ ವೈವಿಧ್ಯಮಯ ವಸ್ತ್ರಾಲಂಕಾರ. ಮಕ್ಕಳ ಸಿದ್ದ ಉಡುಪುಗಳ ಭಂಡಾರ. ರಾಷ್ಟ್ರದ ಸಾವಿರಾರು ಗ್ರಾಮಗಳಿಂದ ಆಯ್ದ ನೇಯ್ಗೆ ವಸ್ತ್ರಗಳು, ಕಣ್ಮನ ಸೆಳೆಯುವ ರೇಷ್ಮೆ ವಸ್ತ್ರಗಳ ಅನಾವರಣ. ರಾಜಸ್ಥಾನ ಶೈಲಿಯಲ್ಲಿ ರೇಷ್ಮೆ ಸೀರೆಗಳ ಪ್ರದರ್ಶನ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ.
ಉದ್ಘಾಟನಾ ಪ್ರಯುಕ್ತ ಗ್ರಾಹಕರಿಗೆ ರೂ. 1000ಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ೫೯ ನಿಮಿಷಕ್ಕೊಮ್ಮೆ ಖರೀದಿದಾರರಿಗೆ ನೀಡಿದ ಅದೃಷ್ಟ ಕೂಪನ್ ಡ್ರಾ ಮಾಡಲಾಗುವುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.